ADVERTISEMENT

ಬಂಡವಾಳ ಹಿಂತೆಗೆತ: ಕಾರ್ಮಿಕರ ಸಭೆ

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:27 IST
Last Updated 5 ಮೇ 2017, 8:27 IST

ಮೈಸೂರು: ಇಲ್ಲಿನ ಬೆಳವಾಡಿಯಲ್ಲಿರುವ ಭಾರತ್‌ ಅರ್ಥ್‌ ಮೂವರ್‌್ಸ ಪ್ರೈವೇಟ್‌ ಲಿಮಿಟೆಡ್‌ (ಬಿಇಎಂಎಲ್‌) ಕಾರ್ಖಾನೆಗೆ ಸಂಸದ ಪ್ರತಾಪಸಿಂಹ ಅವರು ಗುರುವಾರ ಭೇಟಿ ನೀಡಿ ಅಧಿಕಾರಿಗಳು ಹಾಗೂ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದರು.

ಬಿಇಎಂಎಲ್‌ ಮೈಸೂರು ಘಟಕದ ಮುಖ್ಯಸ್ಥ ಶಂಕರ್‌ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅನ್‌ಬಳಗನ್‌ ಅವರು ಸಂಸದರಿಗೆ ಕಾರ್ಖಾನೆಯ ವಿವಿಧ ಘಟಕಗಳ ಕುರಿತು ವಿವರಿಸಿದರು. ಇಲ್ಲಿ ಸಿದ್ಧವಾಗುತ್ತಿರುವ ಯಂತ್ರಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ಅಧಿಕಾರಿಗಳು, ನೌಕರರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಸಂಘಟನೆಗಳ ಸದಸ್ಯರೊಂದಿಗೆ ಪ್ರತಾಪ ಸಿಂಹ ಸಭೆ ನಡೆಸಿದರು. ಕಾರ್ಖಾನೆ ಬೆಳೆದು ಬಂದಿರುವ ಹಾದಿ ಹಾಗೂ ಸಾಧನೆಯ ಕುರಿತು ಮುಖಂಡರು ತಿಳಿಸಿದರು.

ಸುಮಾರು ಎರಡು ಗಂಟೆ ನಡೆದ ಈ ಸಭೆಯಲ್ಲಿ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿ ರುವ ಕೇಂದ್ರ ಸರ್ಕಾರದ ಕ್ರಮದ ಕುರಿತು ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದರು.

ಸಾರ್ವಜನಿಕ ಉದ್ಯಮದ ಬಿಇ ಎಂಎಲ್‌ನಲ್ಲಿ ಶೇ 54ರಷ್ಟು ಷೇರು ಗಳನ್ನು ಸರ್ಕಾರ ಹೊಂದಿದೆ. ಈ ಪೈಕಿ ಶೇ 26ರಷ್ಟು ಷೇರುಗಳನ್ನು ಹಿಂತೆಗೆದು ಕೊಳ್ಳಲು ಸರ್ಕಾರ ಮುಂದಾಗಿರು ವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದ ಬಗ್ಗೆ ಗಮನ ಸೆಳೆದರು.

‘ಕೆಜಿಎಫ್‌, ಬೆಂಗಳೂರು, ಮೈಸೂರಿ ನಲ್ಲಿರುವ ಘಟಕಗಳಲ್ಲಿ ಕನ್ನಡಿಗರೇ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಡವಾಳ ಹಿಂತೆಗೆತದಿಂದ ಇವರ ಭವಿಷ್ಯ ಅತಂತ್ರವಾಗುತ್ತದೆ. ಕಾರ್ಮಿಕರ ಹಿತದೃಷ್ಟಿಯಿಂದ ಖಾಸಗೀಕರಣ ಮಾಡ ದಂತೆ ನೀತಿ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿ ಸಬೇಕು’ ಎಂದು ಕಾರ್ಮಿಕ ಸಂಘಟನೆ ಸಮನ್ವಯ ಸಮಿತಿಯ ಮುಖಂಡರು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.