ADVERTISEMENT

‘ರಾಹ್‌ ಇ ಸುಲೂಕ್‌’ ಕೃತಿ ಬಿಡುಗಡೆ

ಕರ್ನಾಟಕ ಉರ್ದು ಅಕಾಡೆಮಿಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 12:42 IST
Last Updated 31 ಡಿಸೆಂಬರ್ 2017, 12:42 IST

ಮೈಸೂರು: ಉರ್ದು ವಿದ್ವಾಂಸ ಚಿಕ್ಕಮಗಳೂರಿನ ಮೊಹಮ್ಮದ್‌ ಅಲಿ ಅವರು ಸಂಪಾದಿಸಿದ ರಾಹ್‌–ಇ–ಸುಲೂಕ್‌ (ಸೂಫಿತತ್ವಕ್ಕೆ ಮಾರ್ಗ) ಕೃತಿಯನ್ನು ಭಾನುವಾರ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಉರ್ದು ಅಕಾಡೆಮಿಯು ಚಿಕ್ಕಮಗಳೂರಿನ ಕಾರವಾನ್‌ ಇ ಉರ್ದು ಮತ್ತು ಮೈಸೂರಿನ ಫೈಜಾನ್‌ ಇ ಉರ್ದು ಆಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಶೋಧಕ ಪ್ರೊ.ಬಿ.ಷೇಕ್‌ ಅಲಿ ಅವರು ಕೃತಿ ಬಿಡುಗಡೆ ಮಾಡಿದರು.

ರಾಜ್ಯದಲ್ಲಿ ಉರ್ದು ಭಾಷೆಯ ಬೆಳವಣಿಗೆಗೆ ಉರ್ದು ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್‌ ಸಿರಾಜ್‌ ಅಹ್ಮದ್‌ ಖಾಲಿದ್‌ ಹೇಳಿದರು.

ADVERTISEMENT

ಹಲವು ಉರ್ದು ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಮಕ್ಕಳು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಹೆತ್ತವರು ಪ್ರೋತ್ಸಾಹಿಸಬೇಕು. ಹಾಗಾದಲ್ಲಿ ಉರ್ದು ಭಾಷೆಯ ಉಳಿವು ಸಾಧ್ಯ ಎಂದರು.

ದೆಹಲಿಯ ಜೀ ಶಾನ್‌ ಸಾಬ್ರಿ ಮತ್ತು ಫೈಜಾನ್‌ ಸಾಬ್ರಿ ಅವರ ತಂಡದಿಂದ ಮಧ್ಯಾಹ್ನ ಮೆಹ್‌ಫಿಲ್‌ ಇ ಸೂಫಿಯಾನ ಖವ್ವಾಲಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಸೈಯದ್‌ ಖದೀರ್‌ ನಾಜಿಮ್‌ ಸರ್ಗಿರೊ, ಕೃತಿಯ ಲೇಖಕ ಮೊಹಮ್ಮದ್‌ ಅಲಿ, ಕೇರಳದ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್‌ ಇಕ್ಬಾಲ್‌ ಶಹಬಾಜ್‌, ಯೇನಪೋಯ ವಿ.ವಿ.ವಿಶ್ರಾಂತ ಕುಲಪತಿ ಪ್ರೊ.ಸೈಯದ್‌ ಅಖೀಲ್‌ ಅಹ್ಮದ್‌, ಸಿರಾಜ್‌ ಅಹ್ಮದ್‌ ಖಾಲಿದ್‌, ಆರಿಫ್‌ ಅಹ್ಮದ್‌ ಮೇಖ್ರಿ, ಫರೂಕಿಯಾ ಕಾಲೇಜು ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಸಯೀದ್‌ ಅಹ್ಮದ್‌, ಪ್ರೊ.ಅಬ್ದುಲ್‌ ರೆಹಮಾನ್‌ ಗೌಹರ್‌, ಮೈಸೂರು ಸರ್ಖಾಜಿ ಸಯ್ಯದ್‌ ಉಸ್ಮಾನ್‌ ಶರೀಫ್‌, ಉರ್ದು ಅಕಾಡೆಮಿ ಸದಸ್ಯ ಶಫಿ ಅಹ್ಮದ್‌, ಸಂಯೋಜಕ ಎಸ್‌.ಮೊಯಿನುದ್ದೀನ್‌ ಪಾಷಾ, ಡಾ.ಅಹ್ಮದ್‌ ಕೆ.ಅಫ್ಜಲ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.