ADVERTISEMENT

ವಿವಿಧ ಪಕ್ಷಗಳ ಮುಖಂಡರಿಂದ ರೋಡ್‌ಷೋ

​ಪ್ರಜಾವಾಣಿ ವಾರ್ತೆ
Published 11 ಮೇ 2018, 6:47 IST
Last Updated 11 ಮೇ 2018, 6:47 IST
ಸರಗೂರು ಪಟ್ಟಣದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಸಿದ್ದರಾಜು ಮತಯಾಚನೆ ಮಾಡಿದರು
ಸರಗೂರು ಪಟ್ಟಣದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಸಿದ್ದರಾಜು ಮತಯಾಚನೆ ಮಾಡಿದರು   

ಸರಗೂರು: ಚುನಾವಣೆ ಬಹಿರಂಗ ಪ್ರಚಾರದ ಕೊನೆ ದಿನವಾದ ಗುರುವಾರ ಎಚ್.ಡಿ.ಕೋಟೆ ಕ್ಷೇತ್ರದ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಸರಗೂರು ಪಟ್ಟಣದಲ್ಲಿ ಜೆಡಿಎಸ್‌, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ರೋಡ್‌ ಷೋ ನಡೆಸುವ ಮೂಲಕ ಅಬ್ಬರದ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಪರ ಸಂಸದ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ರೋಡ್ ಷೋ ನಡೆಸುವ ಮೂಲಕ ಪ್ರಚಾರ ನಡೆಸಲಾಯಿತು.

ಕೆಇಬಿ ಕಚೇರಿಯಿಂದ ಹೊರಟು  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಮಹಾವೀರ ವೃತ್ತದ ಬಳಿ ಅಂತ್ಯಗೊಂಡಿತು.
ಇದೇ ಸಂದರ್ಭ ಮಾತನಾಡಿದ ಆರ್.ಧ್ರುವನಾರಾಯಣ ಅವರು, 30 ವರ್ಷಗಳ ಹೋರಾಟಗಳ ಫಲದಿಂದಾಗಿ ಸರಗೂರು ಹೊಸ ತಾಲ್ಲೂಕಾಗಿ ಘೋಷಣೆಯಾಗಿದ್ದು, ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಅಭ್ಯರ್ಥಿ ಅನಿಲ್ ಚಿಕ್ಕಮಾದು ಮಾತನಾಡಿದರು.  ಕೇಂದ್ರ ಸೆನ್ಸಾರ್ ಮಂಡಳಿ ಮಾಜಿ ಸದಸ್ಯ ಎಸ್.ವಿ.ವೆಂಕಟೇಶ್, ಕೆಪಿಸಿಸಿ ಸದಸ್ಯೆ ಎಸ್.ಆರ್. ಜಯಮಂಗಳಾ, ಎಸ್.ಎಸ್.ಪ್ರಭುಸ್ವಾಮಿ, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಚಲುವರಾಜು, ಮಂಜುನಾಥ್, ಎಚ್.ಡಿ.ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್‌ ಪಾಷಾ, ಶಂಭುಲಿಂಗನಾಯಕ್, ಬಿ.ವಿ.ಸೀತಾರಾಮ್, ಪಟ್ಟಣ ಪಂಚಾಯಿತಿ ಸದಸ್ಯ ಜಿ.ವಿ. ಮಧುಸೂದನ್, ಎಸ್.ಎಂ.ನಾಗಯ್ಯ, ಎಸ್.ಎಂ.ಮಹಮದ್ ಉಸ್ಮಾನ್, ಜ್ಯೋತಿ, ಸರಗೂರು ಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.