ADVERTISEMENT

ಶತಾವಧಾನಿ ಗಣೇಶ್‌ಗೆ ಚಿತ್ಪ್ರಭಾನಂದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2011, 6:25 IST
Last Updated 19 ಜುಲೈ 2011, 6:25 IST

ಮೈಸೂರು: ಬ್ರಹ್ಮವಿದ್ಯಾ ಮತ್ತು ಅರಸು ಜನಾಂಗದ ವತಿಯಿಂದ ಜಯಚಾಮರಾಜ ಒಡೆಯರ್ ಅವರ 93ನೇ ಜನ್ಮ ದಿನ ಹಾಗೂ ಕರ್ನಾಟಕ ವಾಗ್ಗೇಯಕಾರರ ದಿನವನ್ನು ನಗರದ ಜಗನ್ಮೋಹನ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು.

ವಿದ್ಯುಚ್ಛಕ್ತಿ ಒಂಬಡ್ಸ್‌ಮನ್ ಬಿ.ಆರ್. ಜಯರಾಮರಾಜೇ ಅರಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶತಾವಧಾನಿ ಡಾ.ಆರ್.ಗಣೇಶ್ ಅವರಿಗೆ `ಚಿತ್ಪ್ರಭಾನಂದ~ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಎಂ.ಜಿ.ಆರ್.ಅರಸ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಎ.ವಿ.ವಿದ್ಯಾ ಅರಸ್ ಅವರನ್ನು ಸನ್ಮಾನಿಸಲಾಯಿತು.

ಸಂಗೀತ ವಿದ್ವಾನ್ ಎಸ್.ಕೃಷ್ಣಮೂರ್ತಿ ಅವರು ಸಂಗ್ರಹಿಸಿ, ಪರಿಷ್ಕರಿಸಿದ ಜಯಚಾಮರಾಜ ಒಡೆಯರ್ ಅವರ ಸಂಗೀತ ಕೃತಿಗಳ ಪುಸ್ತಕ `ವಿದ್ಯಾಗಾನವಾರಿಧಿ~ಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ.ರಾ. ಸತ್ಯನಾರಾಯಣ, ಇಂದ್ರಾಕ್ಷಿದೇವಿ, ಮಿರ್ಲೆ ಕಾರ್ತಿಕ್, ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ, ಬ್ರಹ್ಮ ವಿದ್ಯಾ ಸಂಸ್ಥೆಯ ನಿರ್ದೇಶಕಿ ರಾಧಿಕಾ ನಂದಕುಮಾರ್, ಅರಸು ಜನಾಂಗದ ಬಿ.ಮೋಹನ್‌ದೇಶದದರಾಜ ಅರಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.