ADVERTISEMENT

16 ಆರೋಪಿಗಳ ಬಂಧನ

ಕಾವೇರಿ ನದಿಯಲ್ಲಿ ಮರಳು ಅಕ್ರಮ ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 6:58 IST
Last Updated 25 ಜೂನ್ 2016, 6:58 IST

ಮೈಸೂರು: ಕಾವೇರಿ ನದಿಯಲ್ಲಿ ಅಕ್ರಮ ವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಹಾಗೂ ಪರವಾನಗಿ ಇಲ್ಲದೆ ಮರಳು ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಜಿಲ್ಲಾ ಪೊಲೀಸರು 16 ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ವಿನಯಕುಮಾರ್‌, ಭರತ್‌ ಕುಮಾರ್‌, ಮಹೇಶ್‌, ಪುಟ್ಟೇಗೌಡ, ಮಂಜು, ಗಿರೀಶ್‌, ಚಂದನ್‌, ರಾಜೇಶ್‌, ಹರ್ಷ, ಮಂಜುನಾಥ, ಜನಾರ್ದನ್‌, ಅಲೀಂ ಪಾಷ, ಮಹಮ್ಮದ್‌ ಇಸ್ಮಾಯಿಲ್‌, ನಾರಾಯಣ, ರವಿಚಂದ್ರ ಹಾಗೂ ರವಿ ಬಂಧಿತರು. ಆರೋಪಿ ಗಳಿಂದ ಒಂದು ಟಾಟಾ ಸುಮೊ, ಒಂದು ಟ್ರ್ಯಾಕ್ಟರ್‌, ಎರಡು ಟಿಪ್ಪರ್‌, ಒಂದು ಬೈಕ್‌ ಹಾಗೂ 6 ಕೊಪ್ಪರಿಕೆಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಚಾಮರಾಯನಕೋಟೆ ಗ್ರಾಮದ ಕಾವೇರಿ ನದಿಯಲ್ಲಿ ವಿನಯಕುಮಾರ್‌ ಸೇರಿದಂತೆ ಐವರು ಕಾವೇರಿ ನದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಬೆಟ್ಟದಪುರ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು.

ಕೆ.ಆರ್‌.ನಗರ ತಾಲ್ಲೂಕಿನ ಮಂಚನಹಳ್ಳಿ ಬಳಿ ಕೊಪ್ಪರಿಕೆಯಲ್ಲಿ ಮರಳು ತೆಗೆಯುತ್ತಿದ್ದ ಆರೋಪದ ಮೇರೆಗೆ ಗಿರೀಶ್‌ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಹೆಮ್ಮಿಗೆ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಜನಾರ್ದನ್‌ ಮತ್ತು ಅಲೀಂ ಪಾಷನನ್ನು ಹುಣಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ತಾಲ್ಲೂಕಿನ ಬೆಟ್ಟದೂರು ಗ್ರಾಮದ ಬಳಿ ಸಾಗುತ್ತಿದ್ದ ಟಿಪ್ಪರ್‌ ತಡೆದು ಪರಿಶೀಲಿಸಿದಾಗ ಪರವಾನಗಿ ಇಲ್ಲದೆ ಮರಳು ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಟಿಪ್ಪರ್‌ನಲ್ಲಿದ್ದ ನಾರಾಯಣ ಹಾಗೂ ರವಿಚಂದ್ರನನ್ನು ಬಿಳಿಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಣೆ ಮಾಡುತ್ತಿದ್ದ ರವಿಯನ್ನು ಇಲವಾಲ ಹಾಗೂ ಟಾಟಾ ಸುಮೊದಲ್ಲಿ ಮರಳು ಸಾಗಣೆ ಮಾಡುತ್ತಿದ್ದ ಮಹಮ್ಮದ್‌ ಇಸ್ಮಾಯಿಲ್‌ ಎಂಬಾತನನ್ನು ಬನ್ನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.