ADVERTISEMENT

‘ಈದ್ಗಾ ಮೈದಾನ ಅಭಿವೃದ್ಧಿಗೆ ಕ್ರಮ’

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 10:03 IST
Last Updated 17 ಜೂನ್ 2018, 10:03 IST
ಶನಿವಾರ ಮಸ್ಕಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸ್ಥಳದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು
ಶನಿವಾರ ಮಸ್ಕಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸ್ಥಳದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು   

ಮಸ್ಕಿ: ಪಟ್ಟಣದ ಈದ್ಗಾ ಮೈದಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಈದ್‌ ಉಲ್‌ ಫಿತ್ರ್ ಪ್ರಯುಕ್ತ ಪಟ್ಟಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈದ್ಗಾ ಮೈದಾನದ ಅಭಿವೃದ್ಧಿಗೆ ಹಿಂದಿನ ಅವಧಿಯಲ್ಲಿ ವಕ್ಫ್ ಮಂಡಳಿ ಹಾಗೂ ಶಾಸಕರ ಅನುದಾನ ಸೇರಿಸಿ ₹ 20 ಲಕ್ಷ ಅನುದಾನ ನೀಡಲಾಗಿದೆ. ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದರು.

ಡಾ. ಬಿ.ಎಚ್. ದಿವಟರ್, ಧರ್ಮಗುರು ಜೀಲಾನಿ ಖಾಜಿ, ಡಾ. ಅಹ್ಮದ್ ಸಾಬ್. ಅಬ್ದುಲ್ ಅಜೀಜ್, ಅಬ್ದುಲ್ ಗನಿ, ಬಾಹರ್ ಅಲಿ, ಮಸೂದ್ ಪಾಷಾ ಇದ್ದರು. ಇದಕ್ಕೂ ಮುನ್ನ ಮುಸ್ಲಿಮರು ಅಗಸಿ, ಅಶೋಕ ವೃತ್ತ, ಮುದಗಲ್ ರಸ್ತೆ ಮಾರ್ಗವಾಗಿ ಮೆರವಣಿಗೆ ಕೈಗೊಂಡರು.

ADVERTISEMENT

ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.