ADVERTISEMENT

ನೋಟು ರದ್ದತಿ– ಜನ ವಿರೋಧಿ ಕ್ರಮ: ಟೀಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 10:34 IST
Last Updated 4 ಮಾರ್ಚ್ 2017, 10:34 IST

ಮಸ್ಕಿ:  ಕೇಂದ್ರ ಸರ್ಕಾರ ಅಧಿಕ ಮುಖ ಬೆಲೆ ನೋಟು ರದ್ದತಿ ಮಾಡಿದ್ದು ಜನ ವಿರೋಧಿ ಕ್ರಮ ಎಂದು ಶಾಸಕ ಪ್ರತಾಪಗೌಡ ಪಾಟೀಲ ಇಲ್ಲಿ ಟೀಕಿಸಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಶುಕ್ರವಾರ ಕಾಂಗ್ರೆಸ್‌ ಏರ್ಪಡಿಸಿದ್ದ ಜನ ವೇದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ನೋಟು ರದ್ದತಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. 

ಕಾಂಗ್ರೆಸ್‌ ಪಕ್ಷದಿಂದಲೇ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಕೆಲವು ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಟೀಕಿಸಿದರು. 
ಮಸ್ಕಿ ನಗರ ಘಟಕ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಬಸವಂತರಾಯ ಕುರಿ, ಡಾ. ಬಿ.ಎಚ್‌.ದಿವಟರ್‌, ಮೃತ್ಯುಂಜಯ ಗೂಗೆಬಾಳ  ಮಾತನಾಡಿದರು.

ಮಂಜುನಾಥ ಪಾಟೀಲ, ಹನುಮಂತಪ್ಪ ಮುದ್ದಾಪುರ, ಅಮರೇಶಪ್ಪ ಹಾಲಾಪುರ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಬಸ್ಸಪ್ಪ ಬ್ಯಾಳಿ, ಸುವರ್ಣ ವೆಂಕಟೇಶ ಇದ್ದರು.

ಸಿರವಾರ ವರದಿ: ನೋಟು ರದ್ದತಿಯಿಂದ ದೇಶಕ್ಕೆ ಕಂಟಕವಾಗಿದೆ ಎಂದು ಸಂಸದ ಬಿ.ವಿ.ನಾಯಕ ವಾಗ್ದಾಳಿ ನಡೆಸಿದರು. ಇಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ ಶುಕ್ರವಾರ ಏರ್ಪಡಿಸಿದ್ದ ಜನ ವೇದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಬಡಜನರ ಮೇಲೆ ಪ್ರಧಾನಿ ಆಕ್ರಮಣ ಮಾಡಿರುವುದು ರಾಷ್ಟ್ರೀಯ ದುರಂತ. ಇದರಿಂದ ಬಡವರಿಗೆ ಅನುಕೂಲವಾಗಿಲ್ಲ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜ ಮಾತನಾಡಿ, ಪ್ರಧಾನಿ ಬಡವರ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿದ್ದಾರೆ ಎಂದರು.

ಕಾಡಾ ಅಧ್ಯಕ್ಷ ಜಿ.ಹಂಪಯ್ಯನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಇರಬಗೇರಾ, ವೀಕ್ಷಕರಾದ ಜೆ. ಶಿವಮೂರ್ತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಮಂದಕಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಾಹುಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯನಗೌಡ, ಅಬ್ದುಲ್ ಗಫರ್, ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶಿವಾಜಿರಾವ್ ದರ್ಶನಕರ್, ಚಂದ್ರು ಕಳಸ, ಕೆ.ಅಸ್ಲಾಂಪಾಷ, ಎಂ.ಈರಣ್ಣ, ದಾನನಗೌಡ, ಶಿವಶರಣ ಅರಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT