ADVERTISEMENT

ಮದ್ಯಮುಕ್ತ ಗ್ರಾಮ: ಮಹಿಳೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:15 IST
Last Updated 16 ಏಪ್ರಿಲ್ 2017, 9:15 IST

ಮುದಗಲ್:  ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಸಮೀಪದ ನಾಗಲಾಪುರ ಗ್ರಾಮದ ಮಹಿಳೆಯರು ಶನಿವಾರ  ಸ್ಥಳೀಯ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ  ಮನವಿಪತ್ರ ಸಲ್ಲಿಸಿದರು.

ಗ್ರಾಮದ ಕೆಲ ಕಿರಾಣಿ ಅಂಗಡಿ ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಪುರಷರು ಮದ್ಯ ಸೇವಿಸಿ ಬಂದು ಮನೆಯಲ್ಲಿ ಜಗಳವಾಡುತ್ತಾರೆ ಎಂದು ದೂರಿದರು.

ನಾಗಲಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. ಮಹಿಳೆಯರ ಜೀವ ಹಾನಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಗ್ರಾಮದಲ್ಲಿ ಆರೋಗ್ಯಕರ ವಾತವರಣ ನಿರ್ಮಾಣ ಮಾಡಬೇಕು. ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನು ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಮನವಿ ಪತ್ರವನ್ನು ಪಿಎಸ್ಐ ರಂಗಪ್ಪ ದೊಡ್ಡಮನಿ ಸ್ವೀಕರಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಮಸ್ಕಿ, ಹೊಳಯಮ್ಮ, ಹುಚ್ಚಮ್ಮ, ಸರಸ್ವತಿ, ನಾಗಮ್ಮ, ರೇಣುಕಮ್ಮ, ನೀಲಮ್ಮ, ತಿಪ್ಪಮ್ಮ, ಗೌರಮ್ಮ, ಅನುಸಮ್ಮ, ಬಸಮ್ಮ, ವೆಂಕವ್ವ, ಬಾಳಮ್ಮ, ನಾಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.