ADVERTISEMENT

ವರಮಹಾಲಕ್ಷ್ಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 7:07 IST
Last Updated 29 ಆಗಸ್ಟ್ 2015, 7:07 IST

ಲಿಂಗಸುಗೂರು: ತಾಲ್ಲೂಕಿನ ಬಹುತೇಕ ಮನೆ, ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮಹಿಳೆಯರು ಭಕ್ತಿ ಭಾವದಿಂದ ಪಾಲ್ಗೊಂಡಿದ್ದರು.

ಶುಕ್ರವಾರ ಮಹಾಲಕ್ಷ್ಮಿ ದೇವಿಯ ಪ್ರತಿಷ್ಠಾಪನೆ ಮಾಡಿ, ವೈವಿಧ್ಯಮಯ ಹೂಗಳಿಂದ, ಅಲಂಕಾರಿಕ ವಸ್ತುಗಳಿಂದ ಅಲಂಕಾರ ಮಾಡಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು. ಮಹಿಳೆಯರಿಗೆ ಹುಡಿ ತುಂಬಿದ್ದು ವಿಶೇಷವಾಗಿತ್ತು.

ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ವಾಸವಿ ಮಹಿಳಾ ಸಂಘದವರು ಮಹಾಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿದರು. ಹಾಡುಗಳನ್ನು ಹಾಡಿ ಭಕ್ತಿ ಭಾವ ಮೆರೆದರು.

ಸಂಘಟನೆ ಪದಾಧಿಕಾರಿಗಳಾದ ಪ್ರಮೋದಿನಿ ಕನಕಗಿರಿ, ರಾಜೇಶ್ವರಿ ಕೊಂಪಾಲ, ರಮಾದೇವಿ ಕನಕಗಿರಿ, ಜ್ಯೋತಿ ಬಾಗಲವಾಡ, ಕನ್ನಿಕಾ ಕಾಮಿನ್‌, ಸುಲೋಚನಾ ಚೌದ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.