ADVERTISEMENT

‘ಸಿ’ ಗ್ರೂಪ್‌ ನೌಕರರ ವೇತನ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 10:54 IST
Last Updated 16 ಜುಲೈ 2017, 10:54 IST

ರಾಯಚೂರು: ‘ಒಪೆಕ್ ಮತ್ತು ರಿಮ್ಸ್ ಆಸ್ಪತ್ರೆಯ ಸಿ ಗ್ರೂಪ್ ನೌಕರರ ವೇತನ ವನ್ನು ಶೇ 85ರಷ್ಟು ಹೆಚ್ಚಿಸಬೇಕು ಮತ್ತು ವೇತನ ವ್ಯತ್ಯಾಸದ ಹಿಂಬಾಕಿ ಪಾವತಿಸಬೇಕು’ ಎಂದು ಆಗ್ರಹಿಸಿ ಟಿಯುಸಿಐ ಸಂಯೋಜಿತ ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನೌಕರರ ಸಂಘದ ನೇತೃತ್ವದಲ್ಲಿ ಸಿಬ್ಬಂದಿ ಶನಿವಾರ ಅನಿರ್ದಿಷ್ಟಾವಧಿ ಧರಣಿ  ಆರಂಭಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು,‘ 2001 ರಿಂದ ಒಪೆಕ್‌ ಆಸ್ಪತ್ರೆಯಲ್ಲಿ ದುಡಿಯುತ್ತಿ ರುವ ಕಾರ್ಮಿಕರ ವೇತನ ಹೆಚ್ಚಳ ಮಾಡಲು ಆಡಳಿತ ವರ್ಗ ಮುಂದಾಗು ತ್ತಿಲ್ಲ’ ಎಂದು ಆರೋಪಿಸಿದರು.

‘ರಿಮ್ಸ್‌ ಆಸ್ಪತ್ರೆಯಲ್ಲಿ 19 ತಿಂಗಳುಗ ಳಿಂದ ದುಡಿಯುತ್ತಿರುವ ಕಾರ್ಮಿಕರ ವೇತನವೂ ಹೆಚ್ಚಳ ಮಾಡುತ್ತಿಲ್ಲ. ಭತ್ಯೆ ಹೆಸರಿನಲ್ಲಿ ಎಂಟು ಸಾವಿರ ವೇತನ ನೀಡಲಾಗುತ್ತಿದ್ದು, ಸರ್ಕಾರದ ಆದೇಶ ದಂತೆ ವೇತನ ಹೆಚ್ಚಳ ಮಾಡಲು ಡೀನ್‌ ಕವಿತಾ ಪಾಟೀಲ ಅವರಿಗೆ ಹಲವು ಬಾರಿ ಮನವಿ ಮಾಡಿದರೂ, ಸರ್ಕಾರದ ಎಲ್ಲ ನಿಯಮಗಳು ಗಾಳಿಗೆ ತೂರಿ ವೇತನ ಕೇಳಿದ ಕಾರ್ಮಿಕರನ್ನು ಹೊರ ಹಾಕುವ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ರಿಮ್ಸ್‌ ಡೀನ್‌ ಕವಿತಾ ಪಾಟೀಲ ಮತ್ತು ಅವರ ತಂಡದವರು ಕಾರ್ಮಿಕ ರನ್ನು ಪ್ರಾಣಿಗಳಂತೆ ಕಾಣುತ್ತಿದ್ದಾರೆ. ಬಿಡಿಗಾಸು ನೀಡಿ ಕಾರ್ಮಿಕರಿಂದ ಕೆಲಸ ಪಡೆಯುವ ಮೂಲಕ ನೌಕರರನ್ನು ಶೋಷಣೆಗೆ ಗುರಿ ಮಾಡಿದ್ದಾರೆ. ಸಿ ಮತ್ತು ಡಿ ಗ್ರೂಪ್‌ ನೌಕರರ ಮೇಲಿನ ಕಿರುಕುಳ ಹಾಗೂ ದಬ್ಬಾಳಿಕೆ ತಡೆಗಟ್ಟಬೇಕು.

ಸರ್ಕಾರದ ವೇತನ ತಾರತಮ್ಯ ಸಮಿತಿ ಶಿಫಾರಸಿನಂತೆ ಎಲ್ಲ ಮೆಡಿಕಲ್‌ ಕಾಲೇಜು ಹಾಗೂ ಸಂಬಂಧಿಸಿದ ಆಸ್ಪತ್ರೆ ಗಳಲ್ಲಿ ದುಡಿಯುವ ಸ್ಟಾಫ್‌ ನರ್ಸ್‌ ವೇತನವನ್ನು ಶೇ 75ರಿಂದ 85ರವರೆಗೆ ಬಳ್ಳಾರಿ, ಬೆಳಗಾವಿ ಮತ್ತು ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚಿಸಲಾಗಿದೆ. ಆದರೆ, ಈ ಶಿಫಾರಸಿಗೆ ರಿಮ್ಸ್‌ ಆಸ್ಪತ್ರೆ ಯಲ್ಲಿ ಕವಡೆ ಕಾಸಿನ ಕಿಮ್ಮತ್ತು ನೀಡು ತ್ತಿಲ್ಲ’ ಎಂದು ದೂಷಿಸಿದರು.

‘ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಹಾಗೂ ಕಾರ್ಯದರ್ಶಿಗೆ ಲಿಖಿತ ಮನವಿ ನೀಡಿ ವಿವರಿಸಲಾಗಿದೆ. ಆದರೆ ಸ್ಪಂದಿಸಿಲ್ಲ. ಗಿನ್ನಿಸ್‌ ದಾಖಲೆ ಸೃಷ್ಠಿಸಿದ್ದ ಒಪೆಕ್‌ ಆಸ್ಪತ್ರೆ ಯನ್ನು ಕೀಳು ದರ್ಜೆಗೆ ಇಳಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಟಿಯುಸಿಐ ರಾಜ್ಯ ಘಟಕ ಅಧ್ಯಕ್ಷ ಆರ್.ಮಾನಸಯ್ಯ, ಜಿಲ್ಲಾ ಘಟಕ ಅಧ್ಯಕ್ಷ ಜಿ.ಅಮರೇಶ, ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನೌಕರರ ಸಂಘದ ಅಧ್ಯಕ್ಷ ವಾಜೀದ್ ಅಲಿ, ಜಗದೀಶ, ತಿಕ್ಕಯ್ಯ, ಗುರುರಾಜ, ರವಿ, ರಾಜಶೇಖರ, ವಿಶ್ವನಾಥ, ಸಂಪತ್‌ ಕುಮಾರಿ, ಸೂರ್ಯೋದಯ ವಾಕಿಂಗ್‌ ಕ್ಲಬ್‌ ಅಧ್ಯಕ್ಷ ಬಿ.ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.