ADVERTISEMENT

ಸ್ವಾವಲಂಬನೆ ಸಾಧಿಸಲು ಮಹಿಳೆಯರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:22 IST
Last Updated 5 ಡಿಸೆಂಬರ್ 2016, 9:22 IST

ಹಟ್ಟಿ ಚಿನ್ನದ ಗಣಿ: ಮಹಿಳೆಯರು ಸ್ವಾವಲಂಬಿಗಳಾಗಿ ಕುಟುಂಬಕ್ಕೆ ಆರ್ಥಿಕ­ವಾಗಿ ನೆರವಾಗಬೇಕು ಎಂದು ಹಟ್ಟಿ ಚಿನ್ನದ ಗಣಿಯ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಡಾ.ಪ್ರಭಾಕರ ಸಂಗೂರಮಠ ಹೇಳಿದರು.

ಶನಿವಾರ ಹಟ್ಟಿ ಚಿನ್ನದ ಗಣಿ ಕ್ರೀಡಾಸಂಸ್ಥೆಯಲ್ಲಿ ಧಾರವಾಡದ ರಾಷ್ಟ್ರೀಯ ಸಮಗ್ರ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಸ್ಥೆ ಹಾಗೂ ವಿದ್ಯಾ ಗಾರ್ಮೆಂಟ್ಸ್‌  ಸಹಯೋಗದಲ್ಲಿ ಹಮ್ಮಿ­ಕೊಂ­ಡಿದ್ದ ಉಚಿತ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳ ಸದುಪಯೋಗ ಪಡೆದು­ಕೊಂಡು ಆರ್ಥಿಕವಾಗಿ ಸುಧಾರಿಸಿ­ಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಲಿಂಗರಾಜ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯ ದರ್ಶಿ ಶಾಂತಪ್ಪ ಮಳ್ಳಿ, ಡಾ.ತೃಪ್ತಿ ಪಾಟೀಲ, ಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಬಳಗಾನೂರು ಮಾತನಾಡಿದರು.

ರಾಷ್ಟ್ರೀಯ ಸಮಗ್ರ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಡಾ.ವಿಜಯಕುಮಾರಿ, ಕಾರ್ಯದರ್ಶಿ ಶರಣಬಸವ ಪಾಟೀಲ, ಕಾರ್ಮಿಕ ಕಲ್ಯಾಣಾಧಿಕಾರಿ ಜಗನ್‌ಮೋಹನ್, ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಯಂಕೋಬ, ಶಿವಕುಮಾರ ಕವಿತಾಳ ಇದ್ದರು. ಚಿನ್ನಪ್ಪ ನಿರೂಪಿಸಿ, ಸಂತೋಷಮ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.