ADVERTISEMENT

ಕಲುಷಿತ ನೀರಿನಿಂದ ಅನಾರೋಗ್ಯ:ಆತಂಕ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:50 IST
Last Updated 2 ಜನವರಿ 2017, 11:50 IST

ಮಾಗಡಿ: ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಮಾಡಿಕೊಟ್ಟರೆ ಚುನಾಯಿತ ಪ್ರತಿನಿಧಿಗಳಿಗೆ ಜವಾಬ್ದಾರಿ ಕಡಿಮೆಯಾಗುತ್ತದೆ  ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ತಾಲ್ಲೂಕಿನ ಕಲ್ಲುದೇವನಹಳ್ಳಿ ಗ್ರಾಮದಲ್ಲಿ ವೃದ್ಧಾಪ್ಯವೇತನ ಹಾಗೂ ಅಂಗವಿಲಕಲರ ವೇತನದ ಆದೇಶ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸಿಗುವಂತೆ ಅಧಿಕಾರಿಗಳು ಕೆಲಸ  ಮಾಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ  ವಾಸಿಸುವ ಕೆಲ ಬಡವರಿಗೆ  ಇಲ್ಲಿಯವರೆಗೂ ಸವಲತ್ತು  ಸಿಗದೆ ದೂರ ಉಳಿದಿದ್ದಾರೆ. ಅಂತಹವರನ್ನು ಗುರುತಿಸಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ವೃದ್ಧಾಪ್ಯವೇತನ ಹಾಗೂ ಅಂಗವಿಕಲರ ವೇತನ ಸೇರಿದಂತೆ ಅನೇಕ ಯೋಜನೆಯ ಸವಲತ್ತು  ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ನೀಡಬೇಕು. ಆಗ ಸರ್ಕಾರಕ್ಕೆ ಉತ್ತಮ ಹೆಸರು ತರಲು ಸಾಧ್ಯ ಎಂದರು.

ತಾಲ್ಲೂಕನ್ನು ಬರಗಾಲ ಪೀಡಿತ  ಪಟ್ಟಿಗೆ ಸೇರಿಸಿರುವುದರಿಂದ ತಾಲೂಕಿನ ಪ್ರತಿಯೊಬ್ಬ ರೈತರ ಹೆಸರನ್ನು ಬರದ ಪಟ್ಟಿಗೆ ಸೇರಿಸಿ ಸರ್ಕಾರದಿಂದ ಸಿಗುವ ಪರಿಹಾರ ಹಣವನ್ನು ಪ್ರಾಮಾಣಿಕವಾಗಿ ವಿತರಿಸಲು ಅಧಿಕಾರಿಗಳು ಶಕ್ತಿ ಮೀರಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಸೀಗೆಕುಪ್ಪೆ ಗ್ರಾಮ ಪಂಚಾಯ್ತಿ ಸದಸ್ಯ ಬೆಳಗವಾಡಿ ರಂಗನಾಥ್ ಮಾತನಾಡಿ, ಅಧಿಕಾರಿಗಳು ರೈತರನ್ನು ಕಚೇರಿಗಳಿಗೆ ಅಲೆಸದೆ ಸ್ಥಳದಲ್ಲೆ ಕೆಲಸ ಮಾಡಿಕೊಡಲು ಕೋರಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ನಾಗರತ್ನ ಜೆ.ಪಿ. ಚಂದ್ರೇಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಂ.ಎಚ್.ಸುರೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ, ಸದಸ್ಯರಾದ ನಾರಾಯಣಪ್ಪ, ವೆಂಕಟೇಶ್, ಮಾಜಿ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಮತ್ತಿಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ಬೆಳಿಯಪ್ಪ, ಸೀಗೆಕುಪ್ಪೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡರಾದ  ಬೆಂಕಿ ಮಹದೇವ್, ಶ್ರೀನಿವಾಸ್, ರಾಮಕೃಷ್ಣ, ಅನಂದ್, ಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.