ADVERTISEMENT

ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:56 IST
Last Updated 16 ನವೆಂಬರ್ 2017, 10:56 IST

ಮಾಗಡಿ: ತಾಲ್ಲೂಕಿನ ನಾಗಶೆಟ್ಟಿಹಳ್ಳಿ ದಾಖಲೆ ಹುಲಿಯಪ್ಪನ ಕಾಡುಗೊಲ್ಲರ ಹಟ್ಟಿಯಲ್ಲಿ ಪರದಾಡುವಂತಾಗಿದೆ, ಶೀಘ್ರವಾಗಿ ನೀರು ಪೂರೈಸದಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಖಾಲಿ ಬಿಂದಿಗೆ ಇಟ್ಟು ಪ್ರತಿಭಟನೆ ನಡೆಸುವುದಾಗಿ ಮಹಿಳೆಯರು ಆಗ್ರಹಿಸಿದರು.

ಬುಧವಾರ ಕಾಡುಗೊಲ್ಲರ ಹಟ್ಟಿಯಲ್ಲಿ ಖಾಲಿ ಕೊಡಗಳನ್ನು ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು.

ಗೊಲ್ಲರಹಟ್ಟಿಯಲ್ಲಿ 85 ಮನೆಗಳಿವೆ, 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಗ್ಗೀಕುಪ್ಪೆ ಗ್ರಾಮಪಂಚಾಯಿತಿಗೆ ಸೇರುತ್ತದೆ.

ADVERTISEMENT

2 ಕೊಳವೆ ಬಾವಿಗಳಲ್ಲಿನ ನೀರು ಕೆಸರುಮಯವಾಗಿರುವ ಕಾರಣ ಗ್ರಾಮದಲ್ಲಿ ಕುಡಿಯಲು, ಅಡುಗೆ ಮಾಡಲು, ಹಾಗೂ ಇತರೆ ಕಾರ್ಯಗಳಿಗೆ ಬಳಸಲು ನೀರು ಇಲ್ಲದೇ ಸುಮಾರು ಎರಡು ಕಿ.ಮೀ.ದೂರವಿರುವ ಸಿದ್ದಯ್ಯನಪಾಳ್ಯ ಗ್ರಾಮದಿಂದ ತರುವುದೇ ದೊಡ್ಡ ಸವಾಲಾಗಿದೆ ಎಂದು ಜುಂಜಪ್ಪ ದೇವಾಲಯದ ಪೂಜಾರಿ ಯಳನಾಗಯ್ಯ ಮನವಿ ಮಾಡಿದರು.

ಮುಖಂಡರಾದ ಶಾರದಮ್ಮ ಮಾತನಾಡಿ, ಆರು ತಿಂಗಳಿನಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈಗ ಗ್ರಾಮದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದ್ದು, ಅಕ್ಕ ಪಕ್ಕದ ಜಮೀನಿನ ಕೊಳವೆ ಬಾವಿಗಳ ಮಾಲೀಕರಲ್ಲಿ ಯಾಚಿಸಿ ಒಂದು ಬಿಂದಿಗೆ ನೀರು ಹಿಡಿದು ತರುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.