ADVERTISEMENT

ಚನ್ನಪಟ್ಟಣ: ವಿವಿಧ ಕಾಲೇಜಿಗೆ ಉತ್ತಮ ಫಲಿತಾಂಶ

ವಿಧ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:41 IST
Last Updated 4 ಮೇ 2018, 11:41 IST

ಚನ್ನಪಟ್ಟಣ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಕಾಲೇಜುಗಳು ಉತ್ತಮ ಫಲಿತಾಂಶ ದಾಖಲಿಸಿವೆ. ವಿವರ ಇಂತಿದೆ.

ಚೆನ್ನಾಂಬಿಕಾ ಕಾಲೇಜು: ಪಟ್ಟಣದ ಚೆನ್ನಾಂಬಿಕಾ ಪದವಿ ಪೂರ್ವ ಕಾಲೇಜು ಶೇ 87 ರಷ್ಟು ಫಲಿತಾಂಶ ದಾಖಲಿಸಿದೆ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ 16 ಮಂದಿ ಅತ್ಯುತ್ತಮ ಶ್ರೇಣಿಯಲ್ಲಿ, 59 ಮಂದಿ ಪ್ರಥಮ ಶ್ರೇಣಿಯಲ್ಲಿ, 49 ಮಂದಿ ದ್ವಿತೀಯ ಶ್ರೇಣಿಯಲ್ಲಿ, 35 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಎಂ. ಭೂಮಿಕಾ 566 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕೆ.ಪ್ರದೀಪ್ ಕುಮಾರ್ (536), ಆರ್.ಜೀವನ್ (535), ಎನ್.ಆರ್.ಕವನ (523), ಪುರುಷೋತ್ತಮ (523) ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬಿ.ಎಂ.ಅನುಷಾ (529), ಕೆ.ಎನ್.ಆಶಾ (529), ಸಾವಿತ್ರಿ (520) ಅಂಕ ಗಳಿಸಿದ್ದಾರೆ.

ADVERTISEMENT

ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆ ಕಾರ್ಯದರ್ಶಿ ಪೂರ್ಣಿಮ ನಿಂಗೇಗೌಡ, ಪ್ರಾಂಶುಪಾಲ ಎ.ಎಲ್. ಶೇಖರ್ ಹಾಗೂ ಉಪನ್ಯಾಸಕ ಅಭಿನಂದಿಸಿದೆ.

ಜ್ಞಾನ ಸರೋವರ ಕಾಲೇಜು: ಪಟ್ಟಣದ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿಗೆ ಶೇ 92.85 ರಷ್ಟು ಉತ್ತಮ ಫಲಿತಾಂಶ ದಾಖಲಾಗಿದೆ.

12 ಮಂದಿ ಅತ್ಯುತ್ತಮ ಶ್ರೇಣಿಯಲ್ಲಿ, 20 ಮಂದಿ ಪ್ರಥಮ ಶ್ರೇಣಿಯಲ್ಲಿ, 7ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬಿ.ಎಚ್. ಪೂಜಾ 565 (94.16) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಆರ್.ಮೇಘಶ್ರೀ (548) ಕೆ.ಪಿ.ತಾರಾ (542) ಎನ್.ಮಾನಸ (528) ಬಿ.ವಿ. ಗುಣಶ್ರೀ (257) ವಿ.ಎಚ.ಕೀರ್ತನಾ (524) ಡಿ.ಸೂರಜ್ (522) ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ರಾಹುಲ್ ರಾಜೇ ಅರಸ್, ಪ್ರಾಂಶುಪಾಲ ಬಿ.ವಿ.ಜಯರಾಮೇಗೌಡ, ಕಾರ್ಯದರ್ಶಿ ಅದರ್ಶಕುಮಾರ್, ಖಜಾಂಚಿ ಹೇಮಲತಾ ಉಪನ್ಯಾಸಕ ವರ್ಗ ಅಭಿನಂದಿಸಿದೆ.

ಸರ್ಕಾರಿ ಕಾಲೇಜು: ತಾಲ್ಲೂಕಿನ ನಾಗವಾರ ಸಾರ್ವಜನಿಕ ಪದವಿ ಪೂರ್ವ ಕಾಲೇಜು ಶೇ 80 ರಷ್ಟು ಫಲಿತಾಂಶ ಪಡೆದಿದೆ.

ಪರೀಕ್ಷೆ ತೆಗೆದುಕೊಂಡಿದ್ದ 27 ಮಂದಿಯಲ್ಲಿ 22 ಮಂದಿ ಉತ್ತೀರ್ಣರಾಗಿದ್ದಾರೆ. ಎನ್.ಕೆ.ಸಂಧ್ಯಾ 534 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಉಳಿದಂತೆ 10ಮಂದಿ ಪ್ರಥಮ ಶ್ರೇಣಿಯಲ್ಲಿ, 6 ಮಂದಿ ದ್ವಿತೀಯ ಶ್ರೇಣಿಯಲ್ಲಿ, 6ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಂಶುಪಾಲ ಇಂದ್ರಕುಮಾರ್, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.