ADVERTISEMENT

ಪೌರಾಣಿಕ ನಾಟಕದಿಂದ ಉತ್ತಮ ಸಂದೇಶ

ಹಿರಿಯ ಕಲಾವಿದ ಬಸವರಾಜು ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 9:00 IST
Last Updated 14 ಏಪ್ರಿಲ್ 2017, 9:00 IST
ಮಾಗಡಿ ತಿರುಮಲೆ ತಿರುವೆಂಗಳನಾಥ ಜಾತ್ರೆಯ ಅಂಗವಾಗಿ ನಡೆದ ರಾಜ ಸತ್ಯವ್ರತ  ನಾಟಕದ ದೃಶ್ಯ. ಹಾರ್ಮೋನಿಯಂ ಮಾಸ್ಟರ್‌ ಎಚ್‌.ಎಂ.ಶ್ರೀನಿವಾಸ್‌ ಅವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಸನ್ಮಾನಿಸಿದರು
ಮಾಗಡಿ ತಿರುಮಲೆ ತಿರುವೆಂಗಳನಾಥ ಜಾತ್ರೆಯ ಅಂಗವಾಗಿ ನಡೆದ ರಾಜ ಸತ್ಯವ್ರತ ನಾಟಕದ ದೃಶ್ಯ. ಹಾರ್ಮೋನಿಯಂ ಮಾಸ್ಟರ್‌ ಎಚ್‌.ಎಂ.ಶ್ರೀನಿವಾಸ್‌ ಅವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಸನ್ಮಾನಿಸಿದರು   

ಮಾಗಡಿ: ‘ಪೌರಾಣಿಕ ನಾಟಕಗಳು ನಮ್ಮ ಬದುಕಿಗೆ ಪೂರಕವಾದ ಸತ್ಯ, ನ್ಯಾಯ ನೀತಿ, ಧರ್ಮದ ಸಂದೇಶವನ್ನು ಬೋಧಿಸುತ್ತವೆ. ಅವು ನೆಮ್ಮದಿಯ ಬದುಕಿಗೆ ದಾರಿದೀಪಗಳಿದ್ದಂತೆ ಎಂದು ಹಿರಿಯ ಕಲಾವಿದ ಬಸವರಾಜು ತಿಳಿಸಿದರು.

ತಿರುಮಲೆ ತಿರುವೆಂಗಳನಾಥ ಜಾತ್ರೆಯ ಅಂಗವಾಗಿ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ರಾತ್ರಿ ರಾಜ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.

ರಂಗಭೂಮಿ ಕಲಾವಿದರಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಿ, ನೀತಿಯ ಪಾಠವನ್ನು ಸಾರುತ್ತಿರುವ ರಂಗಕಲೆ ಉಳಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪುರಸಭೆಯ ಸದಸ್ಯರಾದ ರಘು, ಮಹೇಶ್‌, ರಿಯಾಜ್‌, ತಿರುಮಲೆ ಬಸವರಾಜು, ನರಸಿಂಹಯ್ಯ,ಪುರಸಭೆ ಮಾಜಿ ಅಧ್ಯಕ್ಷೆ ರುಕ್ಮಿಣಿ ರಂಗನಾಥ್‌, ಕೋಟೆ ಮಾರಮ್ಮದೇವಾಲಯ ಟ್ರಸ್ಟಿನ ಅಧ್ಯಕ್ಷ ಟಿ.ಸಿ.ನಾಗರಾಜು,ರಂಗಕಲಾವಿದೆ ಪದ್ಮಗಿರೀಶ್‌, ರಂಗನಿರ್ದೇಶಕ ಬೆಳಗುಂಬ ಮುನಿಯಪ್ಪ, ಕ್ಯಾಶಿಯೋ ವೆಂಕಟೇಶ್‌ ಇತರರು ಮಾತನಾಡಿದರು. ಹಾರ್ಮೋನಿಯಂ ಮಾಸ್ಟರ್‌ ಎಚ್‌.ಎಂ.ಶ್ರೀನಿವಾಸ್‌ ಇತರರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.