ADVERTISEMENT

ಪ್ರೀತಿಯಿಂದ ಪ್ರಕೃತಿ ಪೋಷಿಸಿ–ಚಂಪಾ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:40 IST
Last Updated 24 ಮೇ 2017, 10:40 IST

ಚನ್ನಪಟ್ಟಣ: ಪ್ರಕೃತಿಯನ್ನು ಪ್ರೀತಿಯಿಂದ ಪೋಷಿಸಿದಾಗ ಮಾತ್ರ ಮನುಷ್ಯ ಉಳಿಯಲು ಸಾಧ್ಯ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಮಹದೇಶ್ವರ ದೇವಸ್ಥಾನದ ಬಳಿಯ ಜೀವೇಶ್ವರ ವನದ ಎರಡನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮವನ್ನು ಗಿಡಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿ ಆರಾಧನೆ ಮೊದಲಿನಿಂದಲೂ ಇದೆ. ಅದನ್ನು ನಾವುಗಳು ಮುಂದುವರೆಸಿಕೊಂಡು ಹೋಗಬೇಕು ಎಂದರು.

‘ದೇವರು ಹಾಗೂ ಮನುಷ್ಯರ ನಡುವಿನ ಸಂಬಂಧ ಹಳೆಯದು. ಅದೇ ರೀತಿ ಪ್ರಕೃತಿ ಮನುಷ್ಯನ ನಡುವಿನ ಸಮಬಂಧವೂ ಬಹಳ ಹಳೆಯದು. ಪ್ರಾಣಿ, ಪಕ್ಷಿ, ಸಸ್ಯ ಹಾಗೂ ಮನುಷ್ಯನ ನಡುವೆ ಅವಿನಾಭಾವ ಸಂಬಂಧ ಇದೆ. ಅದನ್ನು ನಾವು ನೆನಪು ಮಾಡಿಕೊಂಡು ಪ್ರಕೃತಿಯ ಉಳಿವಿಗೆ ಮುಂದಾಗಬೇಕು’ ಎಂದರು.

ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ.ರಾಮೇಗೌಡ ಮಾತನಾಡಿ, ಭೂಹಳ್ಳಿ ಪುಟ್ಟಸ್ವಾಮಿ, ಭೂಮಿಯ ಮೇಲೆ ತಾಪಮಾನ ಹೆಚ್ಚಾಗಿ ಅದು ಪ್ರಾಣಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತಿರುವ ಈ ಸಂದರ್ಭದಲ್ಲಿ ವನಗಳ ನಿರ್ಮಾಣ ಅವಶ್ಯಕ. ಅಂತಹ ಒಳ್ಳೆಯ ಕಾರ್ಯವನ್ನು ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಅವರು ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಗಂಗಾಧರ್ ಮಾತನಾಡಿ, ಸರ್ಕಾರ ಲಕ್ಷಾಂತರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಆದರೆ ನೆಟ್ಟ ಮರುಗಳಿಗೆಯಲ್ಲಿಯೇ ಅವು ಹಾಳಾಗಿರುತ್ತವೆ. ಅವುಗಳನ್ನು ಪೋಷಿಸುವ ಕೆಲಸವೂ ಆಗಬೇಕು ಎಂದರು.

ಪರಿಸರ ತಜ್ಞ ಆರ್.ಜಿ.ಹಳ್ಳಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞರಾದ ಡಾ.ವಿವೇಕಾನಂದ ಭಾಗವಹಿಸಿದ್ದರು. ಜೀವೇಶ್ವರ ವನದ ನಿರ್ಮಾಪಕ ಭೂಹಳ್ಳಿ ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ನಡೆದ ಕವಿಗೋಷ್ಠಿಯಲ್ಲಿ ದೇ. ನಾರಾಯಣಸ್ವಾಮಿ, ಸಾ.ಮ. ಶಿವಮಲ್ಲಯ್ಯ, ಎಂ.ಟಿ.ಕೃಷ್ಣಪ್ಪ ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.