ADVERTISEMENT

ಮೈ ನವಿರೇಳಿಸಿದ ಸಾಹಸಮಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:46 IST
Last Updated 16 ಜನವರಿ 2017, 8:46 IST
ಮೈ ನವಿರೇಳಿಸಿದ ಸಾಹಸಮಯ ಸ್ಪರ್ಧೆ
ಮೈ ನವಿರೇಳಿಸಿದ ಸಾಹಸಮಯ ಸ್ಪರ್ಧೆ   

ಕನಕಪುರ: ಮೈ ನವಿರೇಳಿಸುವ ಸಾಹಸಮಯ ಡರ್ಟ್‌ ಟ್ರ್ಯಾಕ್‌ ಮೋಟಾರ್‌ ಬೈಕ್‌ ಸ್ಪರ್ಧೆಯು ತಾಲ್ಲೂಕಿನ ಬೆಂಗಳೂರು ರಸ್ತೆಯ ವರಗೇರಹಳ್ಳಿ ಗೇಟ್‌ ಬಳಿ ಭಾನುವಾರ ನಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ನುರಿತ ಸ್ಪರ್ಧಾಳುಗಳು ತಮ್ಮ ವಾಹನಗಳೊಂದಿಗೆ ಬಂದು ಸ್ಪರ್ಧೆಯಲ್ಲಿ ಪಾಲ್ಗೊಂಡು ಅದ್ಭುತ ಪ್ರದರ್ಶನ ನೀಡಿ ನೋಡುಗರನ್ನು ಬೆರಗುಗೊಳಿಸಿದರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸ್ಪರ್ಧೆಯು ನಡೆಯಿತು. ನಾವಿಸ್‌ ಕ್ಲಾಸ್‌, ಇಂಟರ್‌ ಮೀಡಿಯೆಟ್‌ ಕ್ಲಾಸ್‌, ಫೋರ್‌ ಸ್ಟ್ರೋಕ್‌ ಕ್ಲಾಸ್‌, ಇಂಡಿಯನ್‌ ಓಪನ್‌ ಕ್ಲಾಸ್‌, ಎಕ್ಸಪರ್ಟ್‌ ಕ್ಲಾಸ್‌, ಟೂ ಸ್ಟ್ರೋಕ್‌ ಕ್ಲಾಸ್‌, ಬುಲೆಟ್‌ ಕ್ಲಾಸ್‌, ಕನಕಪುರ ಬಾಯ್ಸ್‌ ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಎಲ್ಲಾ ವಿಭಾಗದಲ್ಲೂ  ಅತ್ಯುತ್ತಮ ಪ್ರದರ್ಶನ ನೀಡಿದರು. ಪುರುಷರ ಜತೆಗೆ ಮಹಿಳಾ ಸ್ಪರ್ಧಿಗಳು ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷವಾದ ಹಾಗೂ ಸಾಹಸಮಯ ಸ್ಪರ್ಧೆಯಾಗಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು  ಸ್ಪರ್ಧೆಯ ಕೊನೆವರೆಗೂ ಇದ್ದು ವೀಕ್ಷಣೆ ಮಾಡಿದರು. ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನಗದು ಬಹುಮಾನದೊಂದಿಗೆ ಟ್ರೋಫಿ ನೀಡಿ ಅಭಿನಂದಿಸಿದರು.

ಸ್ಪರ್ಧೆ ವಿಜೇತರ ವಿವರ
ಸ್ಪರ್ಧೆಯಲ್ಲಿ ಅಂತಿಮವಾಗಿ ವಿಜೇತರಾದವರ ವಿವರ ಈ ಮುಂದಿನಂತಿದೆ. 

ಕನಕಪುರ ಬಾಯ್ಸ್‌ ವಿಭಾಗದಲ್ಲಿ ಪ್ರಥಮ ಪುಟ್ಟರಾಜು, ದ್ವಿತೀಯ ಗುರು, ತೃತೀಯ ನಂಬರ್‌ 66 ವೀಜೇತರಾದರು. ಮಹಿಳಾ ವಿಭಾಗದಲ್ಲಿ ಪ್ರಿಯಾಂಕ ಪ್ರಥಮ, ಕೆಮಿ ದ್ವಿತೀಯ, ನೂರ್‌ ತೃತೀಯ ಸ್ಥಾನ ಗಳಿಸಿದರು.

ಇಂಡಿಯನ್‌ ಓಪನ್‌ ಕ್ಲಾಸ್‌ ವಿಭಾಗದಲ್ಲಿ ಪ್ರಥಮ ಆನಂದ್‌, ದ್ವಿತೀಯ ನಟರಾಜು, ತೃತೀಯ ಅನೂಪ್‌ ಪಡೆದುಕೊಂಡರು.  ಎಕ್ಸ್‌ಪರ್ಟ್‌ ಕ್ಲಾಸ್‌ನಲ್ಲಿ
ಇಮ್ರಾನ್‌ ಪಾಷಾ ಪ್ರಥಮ, ನಟೇಶ್‌ ದ್ವಿತೀಯ, ಅಪೀಜ್‌ ಅಹಮ್ಮದ್‌ ತೃತೀಯ ಸ್ಥಾನ ಗಳಿಸಿದರು.

ಫೋರ್‌ ಸ್ಟ್ರೋಕ್‌ ಕ್ಲಾಸ್‌ನಲ್ಲಿ ಪ್ರಥಮ ನಟರಾಜು, ದ್ವಿತೀಯ ಇಮ್ರಾನ್‌ ಪಾಷಾ, ತೃತೀಯ ಮಹೇಶ್‌ ಗಳಿಸಿದರು.

ನಾವಿಸ್‌ ಕ್ಲಾಸ್‌ನಲ್ಲಿ ಪ್ರಥಮ ದಾಮೋದರ್‌, ದ್ವಿತೀಯ ನಂಬರ್‌ 54, ತೃತೀಯ ಸ್ಥಾನ ಸಲ್ಮನ್‌ ಮುಜಾಯಿದ್‌, ಟೂ ಸ್ಟ್ರೋಕ್‌ ಕ್ಲಾಸ್‌ನಲ್ಲಿ ಪ್ರಥಮ ಇಮ್ರಾನ್‌, ದ್ವಿತೀಯ ಕಾಲ್‌ಮಿನರ್‌, ತೃತೀಯ ಮಹಮ್ಮದ್‌ ಜಾಕಿರ್‌, ಸ್ಕೂಟರ್‌ ಕ್ಲಾಸ್‌ನಲ್ಲಿಲ ನಂಬರ್‌ 203 ಪ್ರಥಮ, ಶಶಿಕುಮಾರ್‌ ದ್ವಿತೀಯ, ಇಲ್ಲೂ ತೃತೀಯ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT