ADVERTISEMENT

ರಾಮನಗರದಾದ್ಯಂತ ವರುಣನ ಆರ್ಭಟ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 4:50 IST
Last Updated 10 ಸೆಪ್ಟೆಂಬರ್ 2017, 4:50 IST
ಮಾಗಡಿ ತಾಲ್ಲೂಕಿನ ಭಾರ್ಗವತಿ ಕೆರೆ ಇಪ್ಪತ್ತು ವರ್ಷದ ನಂತರ ಕೋಡಿ ಬಿದ್ದಿದ್ದು, ನೀರು ಹೊರ ಹರಿದಿರುವುದು
ಮಾಗಡಿ ತಾಲ್ಲೂಕಿನ ಭಾರ್ಗವತಿ ಕೆರೆ ಇಪ್ಪತ್ತು ವರ್ಷದ ನಂತರ ಕೋಡಿ ಬಿದ್ದಿದ್ದು, ನೀರು ಹೊರ ಹರಿದಿರುವುದು   

ರಾಮನಗರ: ಜಿಲ್ಲೆಯಾದ್ಯಂತ ಶನಿವಾರ ವರುಣ ಆರ್ಭಟಿಸಿದ್ದು, ದಾಖಲೆಯ ಮಳೆಯಾಗಿದೆ. ಮಾಗಡಿ ತಾಲ್ಲೂಕಿನ ಪರಂಗಿಚಿಕ್ಕನಪಾಳ್ಯದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.  ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.

ಬಹುತೇಕ ಕೆರೆಗಳು ತುಂಬಿದ್ದು, ಕೋಡಿ ಬಿದ್ದಿದೆ. ಉಳಿದ ತಾಲ್ಲೂಕುಗಳಲ್ಲಿಯೂ ಭರ್ಜರಿ ಮಳೆ ಸುರಿದಿದೆ. ಮಾಗಡಿ-85 ಮಿಲಿಮೀಟರ್, ರಾಮನಗರ-79, ಕನಕಪುರ-56 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 55ಮಿಲಿಮೀಟರ್ ನಷ್ಟು ಸರಾಸರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT