ADVERTISEMENT

ರಾಮನಗರ: ಮೆಮು ರೈಲು ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 10:04 IST
Last Updated 17 ಜನವರಿ 2017, 10:04 IST
ರಾಮನಗರ: ಮೆಮು ರೈಲು ಸಂಚಾರ ಆರಂಭ
ರಾಮನಗರ: ಮೆಮು ರೈಲು ಸಂಚಾರ ಆರಂಭ   

ರಾಮನಗರ: ಇಲ್ಲಿನ ಜಿಲ್ಲಾ ಕೇಂದ್ರದಿಂದ ರಾಜಧಾನಿಗೆ ಹೆಚ್ಚುವರಿ ರೈಲು ಸೇವೆಗೆ ಸೋಮವಾರ  ಚಾಲನೆ ದೊರೆಯಿತು.
ಟ್ರಾಫಿಕ್‌ನ ಸಮಸ್ಯೆ ಹೊರತಾಗಿ ಬೆಂಗಳೂರು ನಗರ ಕೇಂದ್ರವನ್ನು ತ್ವರಿತವಾಗಿ ತಲುಪಲು ಇಚ್ಛಿಸುವ ಜನರಿಗೆ ಈ ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದೆ.

ರಾಮನಗರದಿಂದ ಬೆಂಗಳೂರಿಗೆ ಹೊರಟ ಮೈನ್‌ಲೈನ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯೂನಿಟ್‌ (ಮೆಮು) ರೈಲಿಗೆ ನಗರದ ನಾಗರಿಕರು ಸೋಮವಾರ ರೈಲ್ವೆ ನಿಲ್ದಾಣದಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ನಂತರ ಸಿಹಿ ಹಂಚಿ ಸಂಭ್ರಮಿಸಿದರು.

ಸಂಭ್ರಮಾಚರಣೆಯಲ್ಲಿ ಕನ್ನಡ ಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಭಾಗದ ಬಹುದಿನಗಳ ಕನಸು ಈಡೇರಿದಂತೆ ಆಗಿದೆ ಎಂದು  ಸಂಭ್ರಮ ಹಂಚಿಕೊಂಡರು.

ರೈಲ್ವೆ ಬೋರ್ಡಿನ ಸದಸ್ಯ ಜಿ.ವಿ. ಪದ್ಮನಾಭ್‌, ನಗರಸಭಾ ಸದಸ್ಯ ಎ.ರವಿ. ಮಾಜಿ ಸದಸ್ಯ ಸೋಮಶೇಖರ್‌, ಬಿಜೆಪಿ ವಕ್ತಾರ ರುದ್ರದೇವರು, ಮುಖಂಡರಾದ ಚನ್ನಕೇಶವ, ಸಿ.ಕೆ. ನಾಗರಾಜ್‌, ರಾಮಣ್ಣ, ರಾಮಾಂಜನೇಯ, ಚನ್ನಪ್ಪ, ಲೋಕೇಶ್‌, ಚಂದನ್‌ ಮೋರೆ, ಬದ್ರಿನಾಥ್‌, ಮಂಜು, ಕರುನಾಡಸೇನೆಯ ಪದಾಧಿಕಾರಿಗಳಾದ ಎಂ. ಜಗದೀಶ್, ಗಾಯಿತ್ರಿಬಾಯಿ, ಜಯಕುಮಾರ್ ಮತ್ತಿತರರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.