ADVERTISEMENT

ರೇಷೆĿನೂಲು ಬಿಚಾĬಣಿಕೆದಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 10:59 IST
Last Updated 10 ಫೆಬ್ರುವರಿ 2016, 10:59 IST

ರಾಮನಗರ :  ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ-ಹರಾಜು ಪ್ರಕ್ರಿಯೆಯಲ್ಲಿ ವೈಫೈ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ನೂಲು ಬಿಚ್ಚಾಣಿಕೆದಾರರು ಮಂಗಳವಾರ ಪ್ರತಿಭಟಿಸಿದರು.

ಇ-ಹರಾಜು ಪ್ರಕ್ರಿಯೆಗೆ ವೈಫೈ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಂದು ಬೆಳಿಗ್ಗೆ ನಡೆದ ಇ-ಹರಾಜು ಪ್ರಕ್ರಿಯೆಲ್ಲಿ ಬೆಳಿಗ್ಗೆ 10.20ಕ್ಕೆ ವೈಫೈಸಮಸ್ಯೆ ಉಂಟಾಯಿತು. ಇದರಿಂದ ರೇಷ್ಮೆಗೂಡನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ನೂಲು ಬಿಚ್ಚಾಣಿಕೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುಹೀಬ್ ಪಾಷಾ ಮಾತನಾಡಿ 'ಇ-ಹರಾಜು ಪ್ರಕ್ರಿಯೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ವೈಫೈನ ಸಮಸ್ಯೆಯಿಂದ ನಮಗೆ ತೊಂದರೆಯಾಗಿದೆ. ಇದಲ್ಲದೆ ಇಲಾಖೆಯವರು ನೀಡಿರುವ ಒಬ್ಬ ವ್ಯಕ್ತಿಯ ಪಾಸ್ವಡರ್್ ಅನ್ನು ನಾಲ್ಕೈದು ಮಂದಿ ಬಳಸುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ. ಈ ಸಮಸ್ಯೆಗಳನ್ನು ಬಗೆಹರಿಸಿ ಎಂದು ಅಧಿಕಾರಿಗಳಿಗೆ ಮನವಿ ನೀಡಿ ನಾಲ್ಕು ತಿಂಗಳಾದರೂ ಪ್ರಯೋಜನವಾಗಿಲ್ಲ' ಎಂದು ಅವರು ಆರೋಪಿಸಿದರು.

'ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಕ್ಷರಸ್ಥರಾಗಿರಬೇಕು. ಇದರಿಂದ ಹಲವರಿಗೆ ತೊಂದರೆಯಾಗುತ್ತಿದೆ. ನಾವು ನಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಇ-ಹರಾಜಿನಲ್ಲಿ ಭಾಗವಹಿಸಬೇಕಾಗಿದೆ. ಇದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಮೊದಲಿನಂತೆ ಮುಕ್ತ ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರಬೇಕು' ಎಂದು ಒತ್ತಾಯಿಸಿದರು. 

ವೈಪೈ ಸಮಸ್ಯೆ ಸರಿಪಡಿಸಲಾಗುವುದು :  ಇ-ಹರಾಜು ಪ್ರಕ್ರಿಯೆಯಲ್ಲಿ ಉಂಟಾಗಿರುವ ವೈಫೈ ಸಮಸ್ಯೆಯನ್ನು ಬಗೆಹರಿಸಲಾಗುವುದು. ತಂತ್ರಜ್ಞರ ಜತೆ ಸಮಾಲೋಚಿಸಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕ ವಿ.ಎಂ. ಶ್ರೀನಿವಾಸಲು ತಿಳಿಸಿದರು.

ಇ-ಹರಾಜು ಪದ್ದತಿಯಲ್ಲಿ ಬೆಳೆಗಾರರು ತಂದ ರೇಷ್ಮೆ ಗೂಡನ್ನು ಪೂರ್ವತೂಕ ಮಾಡಿ, ಪರಿಮಾಣಕ್ಕೆ ಅನುಗುಣವಾಗಿ ಬಿನ್ಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ರೇಷ್ಮೆ ಗೂಡಿನ ಹರಾಜಿನಲ್ಲಿ ಗುಣಮಟ್ಟಕ್ಕೆ ತಕ್ಕಂತೆ ಧಾರಣೆ, ವಹಿವಾಟಿನಲ್ಲಿ ಪಾರದರ್ಶಕತೆ ಮತ್ತು ಶೀಘ್ರ ವಿಲೇವಾರಿ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ಇ-ಹರಾಜಿನ ಧಾರಣೆಯನ್ನು ಪ್ರತಿ ಘಟಕದಲ್ಲಿ ಅಳವಡಿಸಲಾದ ಡಿಸ್ಪ್ಲೆ ಯುನೀಟ್ ಮೂಲಕ ಪ್ರಕಟಿಸಲಾಗುವುದು. ರೈತರು ಮತ್ತು ನೂಲು ಬಿಚ್ಚಾಣಿಕೆದಾರರು ಧಾರಣೆಯನ್ನು ಒಪ್ಪಿದಲ್ಲಿ ತೂಕಕ್ಕೆ ಅಳವಡಿಸಲಾಗುವುದು. ಇಲ್ಲದಿದ್ದಲ್ಲಿ ಗೂಡನ್ನು ಎರಡನೆ ಹರಾಜಿಗೆ ಅಳವಡಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.