ADVERTISEMENT

‘ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 8:48 IST
Last Updated 3 ಮಾರ್ಚ್ 2017, 8:48 IST
ಕನಕಪುರ ತಾಲ್ಲೂಕಿನ ಜೈನ್ ವಿದ್ಯಾನಿಕೇತನದಲ್ಲಿ ಲಯನ್ಸ್‌ ಕ್ಲಬ್‌ ಆಫ್‌ ಕನಕಪುರ ಏರ್ಪಡಿಸಿದ್ದ ಡೆಂಗೆ ಮತ್ತು ರುಬೆಲ್ಲಾ ರೋಗ ಲಸಿಕಾ ಕ್ರಾರ್ಯಕ್ರಮದಲ್ಲಿ ವೈದ್ಯರು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದರು
ಕನಕಪುರ ತಾಲ್ಲೂಕಿನ ಜೈನ್ ವಿದ್ಯಾನಿಕೇತನದಲ್ಲಿ ಲಯನ್ಸ್‌ ಕ್ಲಬ್‌ ಆಫ್‌ ಕನಕಪುರ ಏರ್ಪಡಿಸಿದ್ದ ಡೆಂಗೆ ಮತ್ತು ರುಬೆಲ್ಲಾ ರೋಗ ಲಸಿಕಾ ಕ್ರಾರ್ಯಕ್ರಮದಲ್ಲಿ ವೈದ್ಯರು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದರು   

ಕನಕಪುರ: ದಡಾರ ಮತ್ತು ರುಬೆಲ್ಲಾ ರೋಗ ಸಂಪೂರ್ಣವಾಗಿ ತಡೆಗಟ್ಟಲು ರಾಷ್ಟ್ರವ್ಯಾಪಿ ಲಸಿಕಾ ಆಂದೋಲನ ನಡೆಯುತ್ತಿದ್ದು, 9 ತಿಂಗಳ ಮಕ್ಕಳಿಂದ ಹಿಡಿದು 15 ವರ್ಷದ ಎಲ್ಲಾ ಮಕ್ಕಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ.ಕುಮಾರ್‌ ಮನವಿ ಮಾಡಿದರು.

ತಾಲ್ಲೂಕಿನ ಜೈನ್‌ ವಿದ್ಯಾನಿಕೇತನ ಶಾಲೆಯಲ್ಲಿ ಲಯನ್ಸ್‌ ಕ್ಲಬ್‌ ಆಫ್‌ ಸಿಲ್ಕ್‌ಸಿಟಿ ಮತ್ತು ಐಪಿಪಿ ಸಾರ್ವಜನಿಕ ಆಸ್ಪತ್ರೆ ಸಂಯುಕ್ತವಾಗಿ ಆಯೋಜಿಸಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಸಿಕೆ ಹಾಕಿಸುವುದರಿಂದ ಯಾವುದೇ ಅಡ್ಡಪರಿಣಾಮ ಸಮಸ್ಯೆಯಾಗುವುದಿಲ್ಲ. ಪೋಷಕರು ತಪ್ಪದೆ ತಮ್ಮ ತಮ್ಮ ಮಕ್ಕಳನ್ನ ಸಮೀಪದ ಅಂಗನವಾಡಿ ಅಥವಾ ಆಸ್ಪತ್ರೆಗಳಿಗೆ ಕರೆದುಕೊಂಡುಹೋಗಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.

ಜೈನ್‌ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕಿಶೋರ್‌ ಮಾತನಾಡಿ, ಯಾವುದೇ ಕಾಯಿಲೆಗಳು ಬರದಂತೆ ಮೊದಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು.

ಲಯನ್ಸ್‌ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಯು.ಸಿ.ಕುಮಾರ್‌, ಲ. ಮುನಿ ಲಿಂಗಯ್ಯ, ಖಜಾಂಚಿ ಲ.ಯು.ವಿ . ಸ್ವಾಮಿಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಎನ್‌.ಮರಿಯಪ್ಪ, ಪ್ರಯೋಗಶಾಲೆಯ ಮಂಗಳಗೌರಮ್ಮ, ಆಸ್ಪತ್ರೆಯ ನಾರಾಯ ಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

*
ಇಲ್ಲಿಯವರೆಗೆ 64216 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಹಾಕಿಸಲು ಇದೇ 8 ಕೊನೆಯ ದಿನ, ಲಸಿಕೆಯಿಂದ ದೂರ ಉಳಿದ ಮಕ್ಕಳನ್ನು ಅಂಗನವಾಡಿ,  ಆಶಾ ಕಾರ್ಯಕರ್ತೆಯರು ಗುರುತಿಸಿ ಮನವೊಲಿಸಿ ಲಸಿಕೆ ಹಾಕಿಸಬೇಕು.
-ಡಾ.ಎಂ.ವಿ. ಕುಮಾರ್‌,
ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT