ADVERTISEMENT

ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:54 IST
Last Updated 16 ಜನವರಿ 2017, 6:54 IST
ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ
ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ   

ರಾಮನಗರ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಜಿಲ್ಲೆಯ 5 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಸುಗಮವಾಗಿ ನಡೆಯಿತು. ಮೊದಲ ಪತ್ರಿಕೆ ಬೆಳಗ್ಗೆ 9 ರಿಂದ 12ರ ವರೆಗೆ ಹಾಗೂ 2ನೇ ಪತ್ರಿಕೆ ಮಧ್ಯಾಹ್ನ 1.30 ರಿಂದ 4.30ರ ವರೆಗೆ ನಡೆಯಿತು. ಮೊದಲ ಪತ್ರಿಕೆಗೆ ಜಿಲ್ಲೆಯಲ್ಲಿ 1089 ಅಭ್ಯರ್ಥಿಗಳ ಪೈಕಿ 1032 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದು, ಒಟ್ಟು 57 ಅಭ್ಯರ್ಥಿಗಳು ಗೈರಾಗಿದ್ದರು.

2ನೇ ಪತ್ರಿಕೆಯ 1415 ಅಭ್ಯರ್ಥಿಗಳ ಪೈಕಿ 1339 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದು. ಒಟ್ಟು 76 ಅಭ್ಯರ್ಥಿಗಳು ಗೈರಾಗಿದ್ದಾರೆ. ರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಾಂತಿನಿಕೇತನ ಪ್ರೌಢ ಶಾಲೆ, ಭಾರತೀಯ ಸಂಸ್ಕೃತಿ ವಿದ್ಯಾ ಪೀಠ ಹಾಗೂ ಶರತ್ ಮೆಮೋರಿಯಲ್ ಶಾಲೆಯಲ್ಲಿ ಟಿಇಟಿ ಪರೀಕ್ಷೆಗಳು ಯಾವುದೇ ನಕಲು, ಡಿಬಾರ್ ಪ್ರಕರಣಗಳಿಲ್ಲದೇ, ಶಾಂತಿಯುತವಾಗಿ ನಡೆಯಿತು.

‘ಟಿಇಟಿ ಪರೀಕ್ಷೆಗಳನ್ನು ನಿಯಮಾನುಸಾರ , ವ್ಯವಸ್ಥಿತವಾಗಿ ನಡೆಸಲಾಗಿದೆ.  ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದೊಂದು ಕ್ಯಾಮೆರಾ ಅಳವಡಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಹೊರತೆಗೆಯುವತನಕ ಹಿಡಿದು, ಉತ್ತರ ಪತ್ರಿಕೆ ಸ್ಟೋರ್ ರೂಂ ಸೇರುವವರೆಗೂ ಪ್ರತಿಯೊಂದನ್ನು ಸೆರೆ ಹಿಡಿಯಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.