ADVERTISEMENT

ಹಾರೋಬೆಲೆ ಜಲಾಶಯ ಭರ್ತಿ: ತಮಿಳುನಾಡಿಗೆ ನೀರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 10:09 IST
Last Updated 4 ಸೆಪ್ಟೆಂಬರ್ 2017, 10:09 IST
ರಾಮನಗರ ತಾಲ್ಲೂಕಿನ ಹುಣಸನಹಳ್ಳಿ ಬಳಿ ಇರುವ ಮದಗದ ಕೆರೆ ಕೋಡಿ ಬಿದ್ದಿದ್ದು, ಭಾನುವಾರ ನೀರು ಹೊರಗೆ ಹರಿದಿತ್ತು
ರಾಮನಗರ ತಾಲ್ಲೂಕಿನ ಹುಣಸನಹಳ್ಳಿ ಬಳಿ ಇರುವ ಮದಗದ ಕೆರೆ ಕೋಡಿ ಬಿದ್ದಿದ್ದು, ಭಾನುವಾರ ನೀರು ಹೊರಗೆ ಹರಿದಿತ್ತು   

ರಾಮನಗರ: ಕನಕಪುರ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ನದಿಯ ನೀರು ತಮಿಳುನಾಡಿನತ್ತ ಹರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಅರ್ಕಾವತಿ ನದಿ ಹಾಗೂ ಸನಂದಾ ಹೊಳೆಯಲ್ಲಿನ ಪ್ರವಾಹ ಹೆಚ್ಚಾಗಿದೆ.

ಇದರಿಂದಾಗಿ 1.430 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಕನಕಪುರ ತಾಲ್ಲೂಕಿನ ಹಾರೋಬೆಲೆ ಜಲಾಶಯವು ಭರ್ತಿಯಾಗಿದೆ. ಇಲ್ಲಿನ ಕ್ರೆಸ್ಟ್‌ ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಿಂದ ಹೊರಹರಿಯುವ ನೀರು ಸಂಗಮದ ಬಳಿ ಕಾವೇರಿಯನ್ನು ಸೇರಿಕೊಳ್ಳಲಿದ್ದು, ಅಲ್ಲಿಂದ ತಮಿಳುನಾಡಿಗೆ ಹರಿಯಲಿದೆ.

ಭಾನುವಾರ ಜಲಾಶಯದ ಹೊರಹರಿವು 3,890 ಕ್ಯೂಸೆಕ್‌ನಷ್ಟಿದ್ದು, ಕಳೆದ ಮೂರು ದಿನಗಳಿಂದ ನೀರು ನದಿಗೆ ಹರಿಯುತ್ತಿರುವುದಾಗಿ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯ ಮಂಚನಬೆಲೆ ಹಾಗೂ ಕಣ್ವ ಜಲಾಶಯಗಳ ನೀರು ಸಂಗ್ರಹ ಮಟ್ಟವೂ ಹೆಚ್ಚಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.