ADVERTISEMENT

4 ಕೆರೆಗಳಿಗೆ ಎತ್ತಿನ ಹೊಳೆ ನೀರು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:51 IST
Last Updated 8 ಸೆಪ್ಟೆಂಬರ್ 2017, 9:51 IST

ಸೋಲೂರು (ಮಾಗಡಿ): ಸೋಲೂರು ಹೋಬಳಿಯ 4 ಕೆರೆಗಳಿಗೆ ಎತ್ತಿನ ಹೊಳೆ ನೀರಾವರಿ ಯೋಜನೆ ವತಿಯಿಂದ ನೀರು ಹರಿಸಲಾಗುವುದು ಎಂದು ಸಂಸದ ವೀರಪ್ಪ ಮೊಯಿಲಿ ತಿಳಿಸಿದರು. ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ‘ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಶೂನ್ಯ ಬಡ್ಡಿ ಮೇಳವನ್ನು ಮುಂದಿನ ದಿನ ಗಳಲ್ಲಿ ಆಯೋಜಿಸಲಾಗುವುದು’ ಎಂದರು.

ನೆಲಮಂಗಲ ಶಾಸಕ ಡಾ. ಶ್ರೀನಿವಾಸ ಮೂರ್ತಿ ಮಾತನಾಡಿ, ‘ಸೋಲೂರು ಹೋಬಳಿ ತ್ರಿಶಂಕು ಸ್ಥಿತಿಯಲ್ಲಿದೆ. ನೆಲ ಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದರೆ, ತಾಲ್ಲೂಕಿನ ಕಾರ್ಯ ಕಲಾಪಗಳಿಗೆ ಮಾಗಡಿಗೆ ತೆರಳ ಬೇಕಾಗುತ್ತದೆ’ ಎಂದರು.

‘ರಾಮನಗರ ಜಿಲ್ಲಾ ಪಂಚಾ ಯಿತಿ ವ್ಯಾಪ್ತಿಗೆ ಬರುತ್ತದೆ.ಸೋಲೂರು ಹೋಬಳಿಯನ್ನು ಇತ್ತ ನೆಲಮಂಗಲಕ್ಕಾಗಲಿ ಅಥವಾ ಮಾಗಡಿ ಕ್ಷೇತ್ರಕ್ಕಾಗಲಿ ಸೇರಿಸಲು ಈಗಾಗಲೇ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ ಅವರಲ್ಲಿ ಮನವಿ ಮಾಡಿದ್ದೇವೆ’ ಎಂದರು. ಮನವಿ ಪರಿಶೀಲಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನೇರವಾಗಿ ವಿಷಯ ಚರ್ಚಿಸುವುದಾಗಿ ತಿಳಿಸಿದರು.

ADVERTISEMENT

ಗ್ರಾಮಪಂಚಾಯಿತಿ ಅಧ್ಯಕ್ಷೆ ಪದ್ಮ ಹನುಮಂತರಾಜು, ಜಿಲ್ಲಾ ಪಂಚಾಯ್ತಿ ಸದಸ್ಯೆ ನಾಜಿಯಾ ಖಾನಂ, ತಹಶೀಲ್ದಾರ್‌ ಲಕ್ಷ್ಮೀಸಾಗರ್, ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಆರ್,ಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಸುಗುಣ ಕಾಮರಾಜ್‌, ಗೀತಾಗಂಗರಂಗಯ್ಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕಾಂತರಾಜು, ಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಚೆನ್ನಗಂಗಯ್ಯ, ಬೃಂಗೇಶ್, ಗೊರೂರು ಶ್ರೀನಿವಾಸ್, ಹನುಮಂತಯ್ಯ, ಲಕ್ಷ್ಮಮ್ಮ, ಕುಮಾರ್, ಬಲರಾಮ್, ಮೀನಾಕ್ಷಿ, ಪಂಕಜಾ, ಗಂಗರಾಜು, ಕೃಷ್ಣಪ್ಪ, ಆನಂದಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.