ADVERTISEMENT

ಅಕ್ರಮ ಸಕ್ರಮ ಮನೆಗಳ ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 9:04 IST
Last Updated 17 ಅಕ್ಟೋಬರ್ 2017, 9:04 IST

ಹೊಸನಗರ: ಹಿಂದಿನ ಸರ್ಕಾರ ಜೈಲು ಹಾಗೂ ದಂಡದ ಆದೇಶ ನೀಡಿದ್ದ ಅಕ್ರಮ ಸಕ್ರಮ ಮನೆಗಳ ಫಲಾನುಭವಿಗಳಿಗೆ ತಮ್ಮ ಸರ್ಕಾರ ಮನೆದಳ ಮಂಜೂರಾತಿ ಹಕ್ಕುಪತ್ರ(94ಸಿ) ವಿತರಿಸುತ್ತಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು. ತಾಲ್ಲೂಕಿನ ಸೋನಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆದಳ ಅಕ್ರಮ ಸಕ್ರಮ(94ಸಿ) ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ಅಕ್ರಮವಾಗಿ ಕಂದಾಯ ಇಲಾಖೆಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಜೈಲು ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸುವ ಆದೇಶ ಮಾಡಿತ್ತು. ಆದರೆ ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾದ ಕೂಡಲೆ ಬಿಜೆಪಿ ಸರ್ಕಾರ ಮಾಡಿದ್ದ ಆದೇಶವನ್ನು ರದ್ದು ಮಾಡಿ, ಮನೆಗಳ ಸಕ್ರಮಕ್ಕೆ ಆದೇಶ ಮಾಡಿದ್ದಾರೆ ಎಂದರು.

ಕಾನು, ಸೊಪ್ಪಿನಬೆಟ್ಟ, ಗೋ ಮುಫತ್ತು, ಗೋಮಾಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೂ ಸಹ ತಮ್ಮ ಸರ್ಕಾರ ಹಕ್ಕುಪತ್ರ ನೀಡಲು ಮುಂದಾಗಿತ್ತು. ಆದರೆ ಪರಿಸರವಾದದ ಹೆಸರಿನಲ್ಲಿ ನ್ಯಾಯಾಲಯಕ್ಕೆ ಅಪೀಲು ಹೋದ ಕಾರಣ, ತಡೆಯಾಜ್ಞೆ ಜಾರಿಯಲ್ಲಿದೆ. ಆದ್ದರಿಂದ ಈ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ಸ್ವಲ್ಪ ವಿಳಂಬ ಆಗುತ್ತಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಎಪಿಎಂಸಿ ಸದಸ್ಯ ಕುನ್ನೂರು ಮಂಜಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಚಂದ್ರಮೌಳಿ, ಮಾಜಿ ಅಧ್ಯಕ್ಷ ಗರುಡಪ್ಪ ಗೌಡ, ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್, ಮಾಜಿ ಅಧ್ಯಕ್ಷ ಗರುಪ್ಪ ಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕ್ಷ ಬಾಲಚಂದ್ರ ಹಾಜರಿದ್ದರು. ರಾಜಸ್ವ ನಿರೀಕ್ಷಕ ಜಯಪ್ಪಾಚಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.