ADVERTISEMENT

ಕೈಮಗ್ಗ ವಸ್ತ್ರ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:28 IST
Last Updated 22 ಮಾರ್ಚ್ 2017, 6:28 IST

ಶಿವಮೊಗ್ಗ: ಕೋ ಆಪ್ಟೆಕ್ಸ್‌ ಉತ್ಪನ್ನಗಳು ರಿಯಾಯಿತಿ ದರದಲ್ಲಿ ನಾಗರಿಕರಿಗೆ ದೊರೆಯುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮೇಯರ್ ಏಳುಮಲೈ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಮಂಗಳವಾರ ಯುಗಾದಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕೋ- ಆಪ್ಟೆಕ್ಸ್ ಕೈಮಗ್ಗ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುಗಾದಿ ಹಬ್ಬದ ಸಂದರ್ಭದಲ್ಲಿ ಕೋ ಆಪ್ಟೆಕ್ಸ್ ಹಮ್ಮಿಕೊಂಡಿರುವ ಈ ಪ್ರದರ್ಶನ ಸಾರ್ವಜನಿಕರಿಗೆ ಅನುಕೂಲ ವಾಗಿದೆ. ರಿಯಾಯಿತಿ ದರದಲ್ಲಿ ಸೀರೆ, ಶರ್ಟ್ ಸೇರಿದಂತೆ ವಿವಿಧ ಉಡುಪುಗಳು ಇಲ್ಲಿ ದೊರೆಯಲಿವೆ. ಮೇಳದ ಪ್ರಯೋಜನವನ್ನು ನಗರದ ಜನತೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಿಲ್ಕ್ ಸೀರೆಗಳು, ಕಾಂಚೀಪುರಂ, ಅಮಿ, ಡಿಸೈನರ್ ಸಿಲ್ಕ್ ಸೀರೆ, ಆರ್ಗ್ಯಾನಿಕ್ ಸೀರೆ, ಕಾಟನ್ ಸೀರೆ, ಕೋರಾ ಕಾಟನ್ ಸೀರೆ, ಬೆಡ್‌ಶೀಟ್‌
ಗಳು, ದಿಂಬಿನ ಕವರ್‌, ಟವೆಲ್, ಕುರ್ತಾ, ಚೂಡಿದಾರ್ ಮೆಟಿರೀಯಲ್ಸ್ ಹಾಗೂ ಸಿದ್ಧು ಉಡುಪು ಉತ್ಪನ್ನ, ಪರಿಸರ ಸ್ನೇಹಿ ಹಾಗೂ ರಾಸಾಯನಿಕ ಮುಕ್ತ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ವಸ್ತ್ರ ದೊರೆಯಲಿವೆ. ಮಾರ್ಚ್ 28ರವರೆಗೆ ಪ್ರದರ್ಶನ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಪ್ರದರ್ಶನ ಮತ್ತು ಮಾರಾಟವಿದೆ. ಎರಡು ಉತ್ಪನ್ನ ಖರೀದಿಸಿದರೆ ಒಂದು ಉಚಿತ ಪಡೆಯಬಹುದು ಎಂದು ಅವರು ಹೇಳಿದರು. ಕೋ ಆಪ್ಟೆಕ್ಸ್‌ನ ವಿಭಾಗೀಯ ವ್ಯವಸ್ಥಾಪಕ ಕುಲಕರ್ಣಿ, ವ್ಯವಸ್ಥಾಪಕ ಸುಬ್ರಮಣ್ಯ, ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT