ADVERTISEMENT

ಜೆಡಿಎಸ್ ಮುಖಂಡರಿಂದ ಬೆದರಿಕೆ ಕರೆ: ಬಂಗೇರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 10:35 IST
Last Updated 19 ಏಪ್ರಿಲ್ 2018, 10:35 IST

ಸೊರಬ: ‘ಬಿಜೆಪಿ ಸೇರಿದ ನಂತರ ಜೆಡಿಎಸ್‌ನ ಕೆಲ ಮುಖಂಡರು ನನಗೆ ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಮುಖಂಡ ವಸಂತ್ ಬಂಗೇರ ಆರೋಪಿಸಿದರು.

‘ಏಳು ವರ್ಷಗಳಿಂದ ಜೆಡಿಎಸ್‌ನಲ್ಲಿ ಪ್ರಾಮಾಣಿಕ ಕಾರ್ಯಕರ್ತನಾಗಿ ಶ್ರಮಿಸಿದ್ದೆ. ಒಂದು ಸಮಾಜಕ್ಕೆ ಸೀಮಿತವಾದ ರೀತಿಯಲ್ಲಿ ಜೆಡಿಎಸ್ ಮುಖಂಡರು ವರ್ತಿಸುತ್ತಿದ್ದು, ಇದರಿಂದ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಇದನ್ನು ಅರಿತು ಈಚೆಗೆ ಕುಮಾರ್ ಬಂಗಾರಪ್ಪ ನಾಯಕತ್ವ ಒಪ್ಪಿ ಬಿಜೆಪಿ ಸೇರಿದ್ದೇನೆ. ಇದಾದ ನಂತರ ಎಪಿಎಂಸಿ ಅಧ್ಯಕ್ಷ ಎಲ್.ಜಿ. ರಾಜಶೇಖರ್ ಅವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕುಮಾರ್ ಬಂಗಾರಪ್ಪ ಅವರನ್ನು ಗೆಲ್ಲಿಸುವುದೇ ನನ್ನ ಉದ್ದೇಶ. ಗೊಡ್ಡು ಬೆದರಿಕೆಗಳಿಗೆ ಹೆದರಿ ಪಕ್ಷ ಸಂಘನೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ’ ಎಂದರು.

ADVERTISEMENT

‘ಜೆಡಿಎಸ್ ಮುಖಂಡರ ಬೆದರಿಕೆ ಹಾಗೂ ಗೂಂಡಾ ವರ್ತನೆ ಮುಂದುವರಿದರೆ ಕಾನೂನು ಹೋರಾಟ ನಡೆಸುತ್ತೇನೆ ಎಂದರು.

ಮುಖಂಡರಾದ ದೇವೇಂದ್ರಪ್ಪ ಚನ್ನಾಪುರ, ಸೋಮಶೇಖರಗೌಡ, ಹೂವಣ್ಣ ಕೊಡಕಣಿ, ಕಿರಣಕುಮಾಋ, ಜಯಕುಮಾರ, ಆನಂದ, ಮಲ್ಲೇಶಗೌಡ ಕುಂಸಿ, ವಿರೇಂದ್ರ, ಷಡಕ್ಷರಿ ಕೊಡಕಣಿ, ಎಂ. ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.