ADVERTISEMENT

ಪ್ರಚೋದನಕಾರಿ ಭಾಷಣ; ಗಡೀಪಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 5:20 IST
Last Updated 6 ಜುಲೈ 2017, 5:20 IST

ಶಿವಮೊಗ್ಗ: ಸಾಗರದಲ್ಲಿ ಈದ್‌ ಉಲ್ ಫಿತ್ರ್‌ ಆಚರಣೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಧರ್ಮಗುರು ಆಲೆ ಮುಸ್ತಾಫ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಸಾಗರ ತಾಲ್ಲೂಕಿನ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಗರದ ಜಾಮೀಯಾ ಮಸೀದಿ ಆವರಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ವೇಳೆ ಮಸೀದಿ ಕಮೀಟಿಯ ಖಜಾಂಚಿ ಸೈಯದ್ ತಾಹೀರ್‌ ಅವರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಕೃತಜ್ಞತೆ ಸಲ್ಲಿಸಿ, ಮಾತನಾಡುವಾಗ ಮಧ್ಯ ಪ್ರವೇಶಿಸಿದ ಆಲೆ ಮುಸ್ತಾಫ ಅವರು ಸಚಿವರ ವಿರುದ್ಧ ಕೀಳುಮಟ್ಟದ ಪದ ಬಳಕೆ ಮಾಡಿದ್ದರು. 

ಅವರ ವರ್ತನೆ ಖಂಡಿಸಿದ್ದ ಮುಸ್ಲಿಂ ಸಮಾಜ ಮುಸ್ತಾಫ ಅವರ ರಾಜೀನಾಮೆ ಪಡೆದಿದೆ. ಆದರೆ, ಅಹಮದ್‌ ರಜಾ ಮೂಮೆಂಟ್ ಸಂಘಟನೆ  ಧರ್ಮಗುರುಗಳ ವರ್ತನೆ ಸಮರ್ಥಿಸಿಕೊಂಡಿದೆ. ಅವರ ಪರ ಮಸೀದಿ ಎದುರು ಪ್ರತಿಭಟನೆ ನಡೆಸಿದೆ ಎಂದು ದೂರಿದರು.

ADVERTISEMENT

ಪ್ರತಿಭಟನೆ ವೇಳೆ ಎಲ್ಲಾ ಮುಸ್ಲಿಮರೂ ಭಯೋತ್ಪಾದಕರು ಎಂದು ನಿಂದಿಸಿದ್ದಾರೆ. ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಇಂತಹ ಹೇಳಿಕೆ ನೀಡಿರುವ ಸೈಯದ್‌ ಅಬ್ಬಾಸ್‌, ಸೈಯದ್ ಮುಜಾಮಿಲ್, ಸೈಯದ್‌ ಗೌಸ್‌ ಮೊಹಿದ್ದೀನ್, ಕರೀಂ ಸಾಬ್, ಸೈಯದ್ ಜಾಕೀರ್ ಅವರನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್, ಅಲಿ ಅದೀಸ್. ತಬ್ಲಿಕ್ ಜಮಾತೆ ಸಂಘಟನೆಗಳ ಮುಖಂಡರಾದ ಮುಬಿನ್‌ ಅಲಿಖಾನ್, ಖುದ್ದೂಸ್‌ ಅಹಮದ್, ಖಾಲೀದ್‌, ಜಾವೀದ್‌, ಜಾಫರ್ ಅಲಿಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.