ADVERTISEMENT

ಹಾಲಿನ ಖರೀದಿ ದರ ₹ 1.50 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:05 IST
Last Updated 12 ಜನವರಿ 2017, 11:05 IST
ಶಿವಮೊಗ್ಗ: ರೈತರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿಗೆ ಶಿವಮೊಗ್ಗ ಹಾಲು ಒಕ್ಕೂಟ ₹ 1.50 ಹೆಚ್ಚಳ ಮಾಡಿದೆ.
 
ದರ ಹೆಚ್ಚಳದ ಪರಿಣಾಮವಾಗಿ ಪ್ರತಿ ಲೀಟರ್‌ ಹಾಲಿನ ಖರೀದಿ ದರ ₹  25.15ಕ್ಕೆ ಏರಿಕೆಯಾಗಿದೆ. ಸರ್ಕಾರದ ಪ್ರೋತ್ಸಾಹ ಧನ ₹  5 ಸೇರಿ ಒಟ್ಟು ₹  30.15 ದೊರೆಯಲಿದೆ. ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆಯ 65 ಸಾವಿರ ಹಾಲು ಉತ್ಪಾದಕರು ಇದರ ಪ್ರಯೋಜನ ಪಡೆಯಲಿದ್ದಾರೆ.
 
ಮೂರು ಜಿಲ್ಲೆಗಳಲ್ಲಿ ಒಟ್ಟು 1,080 ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದು, ಪ್ರತಿ ದಿನ 4.34 ಲಕ್ಷ ಲೀಟರ್‌ ಹಾಲು ಶೇಖರಿಸಲಾಗುತ್ತದೆ. 
 
‘ಬರ ಪರಿಸ್ಥಿತಿಯ ಕಾರಣ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿದೆ. ಹಾಲು ಉತ್ಪಾದನೆಯ ವೆಚ್ಚ ಅಧಿಕವಾಗಿದೆ. ಹಾಗಾಗಿ, ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಯಿತು. ಆದರೆ, ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಇದರಿಂದ ಒಕ್ಕೂಟ ಪ್ರತಿದಿನ ₹  6.45 ಲಕ್ಷ ಹೆಚ್ಚುವರಿ ಹೊರೆ ಬೀಳಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಜಗದೀಶಪ್ಪ ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.