ADVERTISEMENT

ಶಿಕಾರಿಪುರ: ಕನಕ ಜ್ಯೋತಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 7:02 IST
Last Updated 6 ಫೆಬ್ರುವರಿ 2018, 7:02 IST
ಶಿಕಾರಿಪುರಕ್ಕೆ ಸೋಮವಾರ ಬಂದ ಕನಕ ಜ್ಯೋತಿಯನ್ನು ಕುರುಬ ಸಮಾಜದವರು ಸ್ವಾಗತಿಸಿ ವಿವಿಧ ಕಲಾಮೇಳಗಳೊಂದಿಗೆ ಮೆರವಣಿಗೆ ನಡೆಸಿದರು.
ಶಿಕಾರಿಪುರಕ್ಕೆ ಸೋಮವಾರ ಬಂದ ಕನಕ ಜ್ಯೋತಿಯನ್ನು ಕುರುಬ ಸಮಾಜದವರು ಸ್ವಾಗತಿಸಿ ವಿವಿಧ ಕಲಾಮೇಳಗಳೊಂದಿಗೆ ಮೆರವಣಿಗೆ ನಡೆಸಿದರು.   

ಶಿಕಾರಿಪುರ: ಕಾಗಿನೆಲೆ ಕನಕಗುರುಪೀಠದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಗ್ರಾಮದ ಕನಕ ಗುರುಪೀಠದ ಶಾಖಾ ಮಠದಲ್ಲಿ ಆಯೋಜಿಸಿರುವ ಸಮಾರಂಭಕ್ಕೆ ಸಂಚರಿಸುವ ಕನಕಜ್ಯೋತಿ ಪಟ್ಟಣಕ್ಕೆ ಬಂದ ಸಂದರ್ಭದಲ್ಲಿ ಕುರುಬ ಸಮಾಜ ಸದಸ್ಯರು ಅದ್ದೂರಿ ಸ್ವಾಗತ ಕೋರಿದರು.

ಶಿವಮೊಗ್ಗದಿಂದ ಪಟ್ಟಣಕ್ಕೆ ಬಂದ ಕನಕಜ್ಯೋತಿಗೆ ಕನಕ ಪಾರ್ಕ್‌ ಮುಂಭಾಗ ಕುರುಬ ಸಮಾಜದವರು ಸ್ವಾಗತ ಕೋರಿದರು. ಕನಕಜ್ಯೋತಿಯೊಂದಿಗೆ ಬಂದಿದ್ದ ಕೆ.ಆರ್‌. ನಗರ ಕನಕ ಗುರುಪೀಠ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಅವರು ಕನಕ ಪಾರ್ಕ್‌ನಲ್ಲಿರುವ ಕನಕಮೂರ್ತಿಗೆ ಮಾಲಾರ್ಪಣೆ ಮಾಡಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾಮೇಳಗಳೊಂದಿಗೆ ಕನಕಜ್ಯೋತಿ ಮೆರವಣಿಗೆ ನಡೆಯಿತು.

‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಪ್ಪ, ಮಾಜಿ ಅಧ್ಯಕ್ಷ ಬೋಗಿರಾಮಪ್ಪ, ಕಾರ್ಯದರ್ಶಿ ಬೋಗಿ ರಾಜು. ಮುಖಂಡರಾದ ಕೆ. ಹಾಲಪ್ಪ, ಗೋಣಿ ಮಾಲತೇಶ್‌, ಬಿ.ಸಿ. ವೇಣುಗೋಪಾಲ್‌, ಡಿ.ಕೆ.ಚಂದ್ರಪ್ಪ, ಶಿವಲಿಂಗಪ್ಪ ಪಾರಿವಾಳ, ಹಳ್ಳೂರು ಪರಮೇಶ್ವರಪ್ಪ, ಮತ್ತಿಕೋಟೆ ಲಕ್ಕಪ್ಪ, ನಗರದ ರವಿಕಿರಣ್‌ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.