ADVERTISEMENT

₹65.88 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:15 IST
Last Updated 17 ಮೇ 2017, 5:15 IST

ಶಿವಮೊಗ್ಗ: ನಗರೋತ್ಥಾನ ಮೂರನೇ ಹಂತದ ₹ 65.88 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ  ಮಂಗಳವಾರ ಅನುಮೋದನೆ ದೊರೆತಿತು.

ಈಗಾಗಲೇ ₹ 77.50 ಕೋಟಿ ಕ್ರಿಯಾ ಯೋಜನೆಗೆ ರೂಪಿಸಲಾಗಿತ್ತು. ₹ 65.88 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಭದ್ರಾವತಿ ನಗರಸಭೆ ₹29.75 ಕೋಟಿ, ಸಾಗರ ನಗರಸಭೆ ₹21.25 ಕೋಟಿ, ಶಿಕಾರಿಪುರ ಪುರಸಭೆ ₹6.38 ಕೋಟಿ, ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ ₹ 1.70 ಕೋಟಿ, ಸೊರಬ ಪಟ್ಟಣ ಪಂಚಾಯ್ತಿ ₹ 1.70 ಕೋಟಿ, ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ₹ 1.70 ಕೋಟಿ, ಜೋಗ್ – ಕಾರ್ಗಲ್ ಪಟ್ಟಣ ಪಂಚಾಯ್ತಿ ₹ 1.70 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು.

ಸಚಿವ ಕಾಗೋಡು ತಿಮ್ಮಪ್ಪ, ನಗರೋತ್ಥಾನ ಯೋಜನೆ ಮಾರ್ಗ ಸೂಚಿಯಂತೆಯೇ ಕ್ರಿಯಾ ಯೋಜನೆ ತಯಾರಿಸಬೇಕು. ಜಿಲ್ಲಾ ಸಮಿತಿ ಅನುಮೋದನೆ ನೀಡಿದ ಕ್ರಿಯಾ ಯೋಜನೆಯನ್ನು ಪೌರಾಡಳಿತ ನಿರ್ದೇಶ ನಾಲಯದ  ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು ಎಂದು  ಸೂಚಿಸಿದರು. ಪರಿಷ್ಕರಿಸಿದ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯ ನಗರ  ಸಂಸ್ಥೆಗಳಿಗೆ ಸೂಚಿಸಿತ್ತು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.