ADVERTISEMENT

ಕನಕದಾಸರು ನಮಗೆ ಆದರ್ಶವಾಗಬೇಕು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:35 IST
Last Updated 7 ನವೆಂಬರ್ 2017, 9:35 IST

ಶಿರಾ: ‘ಸಮಾಜದಲ್ಲಿ ಸಮಾನತೆಯನ್ನು ಮೂಡಿಸಲು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದ ಕನಕದಾಸರು ನಮಗೆ ಆದರ್ಶವಾಗಬೇಕು’ ಎಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹೇಳಿದರು. ನಗರದ ರೇವಣ್ಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿಂದುಳಿದ ಸಮಾಜದಲ್ಲಿ ಕನಕದಾಸರು ಜನಿಸಿದರು ಸಹ ಅವರ ಚಿಂತನೆಗಳು ಹೆಚ್ಚು ಪ್ರಸ್ಥುತವಾಗಿವೆ. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು’ ಎಂದರು.

ಮೆರವಣಿಗೆ: ನಗರದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ರೇವಣ್ಣಸಿದ್ದೇಶ್ವರ ಮಠದ ಪೀಠಾಧ್ಯಕ್ಷ ರೇವಣ್ಣ ಒಡೆಯರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಜೆಡಿಎಸ್ ಮುಖಂಡ ಬಿ.ಸತ್ಯನಾರಾಯಣ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಗಿರಿಜಮ್ಮ ಶ್ರೀರಂಗಯಾದವ್, ನಗರಸಭೆ ಸದಸ್ಯ ಮಂಜುನಾಥ್, ಶಾರದಾ ಶಿವಕುಮಾರ್, ಅಂಜಿನಪ್ಪ, ರೇಣುಕಮ್ಮ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಡಾ.ಮಂಜುನಾಥ್, ಬಿ.ಜೆ.ಕರಿಯಪ್ಪ, ಆರ್.ಲಕ್ಷ್ಮಣ್, ರಂಗನಾಥ್ ಎಸ್.ಕೆ.ದಾಸಪ್ಪ, ಎಸ್.ಎಲ್.ರಂಗನಾಥ್, ಎಸ್.ಪಿ.ಶಿವಶಂಕರ್, ಕವಿತಾ ಲಕ್ಷ್ಮಣ್, ಜಯಶಂಕರ್, ಭಾನುಪ್ರಕಾಶ್, ಅಶೋಕ್, ಶ್ರೀನಿವಾಸ್, ಶಿವಕುಮಾರ್, ಸುರೇಶ್, ರವಿಕುಮಾರ, ತಹಶೀಲ್ದಾರ್ ಆರ್.ಗಂಗೇಶ್, ಡಿವೈಎಸ್‌ಪಿ ವೆಂಕಟೇಶ್ ನಾಯ್ಡು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.