ADVERTISEMENT

ಜೋಳದ ಚಿಗುರು ತಿಂದು 28 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 5:55 IST
Last Updated 30 ನವೆಂಬರ್ 2017, 5:55 IST

ಶಿರಾ: ತಾಲ್ಲೂಕಿನ ಚಿಕ್ಕನಕೋಟೆ ಗ್ರಾಮದಲ್ಲಿ ಬುಧವಾರ ಜೋಳದ ಚಿಗರು ತಿಂದು 28 ಕುರಿ ಮೃತ ಪಟ್ಟಿವೆ.

ತಾಲ್ಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿ ಗ್ರಾಮದ ದೊಡ್ಡಯ್ಯ ಎಂಬುವರಿಗೆ ಸೇರಿದ ಕುರಿಗಳು ಎನ್ನಲಾಗಿದೆ. ಸಂಜೆಯಾದ ಕಾರಣ ಸ್ವಗ್ರಾಮದ ಕಡೆ ಸಾಗುತ್ತಿದ್ದ ಕುರಿಗಳು ಏಕಾಏಕಿ ಹೊಲದಲ್ಲಿದ್ದ ಜೋಳದ ಹಸಿರು ಚಿಗರು ಕಂಡು ಮೇಯಲು ಆರಂಭಿಸಿವೆ. ಜೋಳದ ಚಿಗುರು ತಿಂದ ಕೇವಲ 15 ನಿಮಿಷದಲ್ಲಿ ಕುರಿಗಳು ಮಿಲಮಿಲ ಒದ್ದಾಡುವುದನ್ನು ನೋಡಿದ ದೊಡ್ಡಯ್ಯ ತಕ್ಷಣ ಪಶು ವೈದ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಕೃಷ್ಣಮೂರ್ತಿ, ಡಾ.ಗಂಗಾಧರ, ಡಾ.ದೇವರಾಜು ವೈಧ್ಯರ ತಂಡ ಅಸ್ವಸ್ಥವಾಗಿದ್ದ ಕುರಿಗಳಿಗೆ ಚಿಕಿತ್ಸೆ ನೀಡಿದರು. ಮೃತ ಪಟ್ಟ ಕುರಿಗಳಿಗೆ ತಲಾ ₹ 5 ಸಾವಿರ ಪರಿಹಾರ ಕೊಡಿಸುವುದಾಗಿ ಪಶು ಉಪನಿರ್ದೇಶಕರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.