ADVERTISEMENT

ದೇಸಿ ತಂತ್ರಜ್ಞಾನದ ಹೊಸ ಕೃಷಿ ಸಾಧನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:46 IST
Last Updated 22 ಜೂನ್ 2017, 9:46 IST

 (ತೋವಿನಕೆರೆ): ತುಮಕೂರು ತಾಲ್ಲೂಕು ಕುಚ್ಚಂಗಿಯ ರೈತ ರಮೇಶ್ ಜಮೀನಿನಲ್ಲಿ ಸಾಲು ಮಾಡಿಕೊಳ್ಳಲು ದೇಸಿ ತಂತ್ರಜ್ಞಾನದ ಕೈ ಸಲಕರಣೆ ತಯಾರು ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

1.30 ಎಕರೆಯಲ್ಲಿ ತೊಗರಿ ಬಿತ್ತಿದ್ದರು. ಈ ತೊಗರಿಗೆ ಸಾಲು ಮಾಡಲು ದೇಸಿ ಕೋಲು ಗುದ್ದಲಿ ಯಂತಹ ಉಪಕರಣವನ್ನು ಮತ್ತಷ್ಟು ದೊಡ್ಡದಾಗಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಕೋಲು ಗುದ್ದಲಿ ಒಂದು ಒಂದು ಅಡಿ ಇರುತ್ತದೆ. ಆದರೆ ಇವರು ರೂಪಿಸಿರುವ ಉಪಕರಣ ನಾಲ್ಕು ಅಡಿ ಇದೆ. ಇದರಿಂದ ಸುಲಭವಾಗಿ ಸಾಲು ಎಳೆಯ ಬಹುದು. ಇದರಿಂದ ಕೂಲಿ ಆಳುಗಳ ಸಮಸ್ಯೆ ನೀಗುತ್ತದೆ.

‘ತೊಗರಿಗೆ ಆಳ ಹೆಚ್ಚು ಬೀಳ ಬಾರದು. ಹದವಾಗಿ ಸಾಲು ಹೊಡೆಯ ಬೇಕು. ಆ ರೀತಿ ಈ ಉಪಕರಣ ರೂಪಿಸಲಾಗಿದೆ.  ಕುಟುಂಬದವರೇ ಬೀಜ ಬಿತ್ತುತ್ತೇವೆ. ಈ ಉಪಕರಣದಿಂದ ಅನುಕೂಲವಾಗಿದೆ’ ಎನ್ನುವರು ರಮೇಶ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.