ADVERTISEMENT

ಪತ್ರಿಕೆಯ ಕಾರ್ಯಕ್ರಮಕ್ಕೆ ಮೆಚ್ಚುಗೆಯ ಮಹಾಪೂರ

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:51 IST
Last Updated 24 ಮೇ 2016, 5:51 IST
ಪತ್ರಿಕೆಯ ಕಾರ್ಯಕ್ರಮಕ್ಕೆ ಮೆಚ್ಚುಗೆಯ ಮಹಾಪೂರ
ಪತ್ರಿಕೆಯ ಕಾರ್ಯಕ್ರಮಕ್ಕೆ ಮೆಚ್ಚುಗೆಯ ಮಹಾಪೂರ   

ತುಮಕೂರಿನಲ್ಲಿ ಸೋಮವಾರ ಎಸ್‌ಐಟಿ ಬಿರ್ಲಾ ಸಭಾಂಗಣದಲ್ಲಿ ನಡೆದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ನ ಸಿಇಟಿ ಕೌನ್ಸೆಲಿಂಗ್ ಮಾರ್ಗದರ್ಶನ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಬಿರದ ಕುರಿತು ಹಂಚಿಕೊಂಡ ಅಭಿಪ್ರಾಯಗಳು.

ಉಪಯುಕ್ತ
ಸಿಇಟಿ ಕೌನ್ಸೆಲಿಂಗ್ ಕುರಿತು ಉಪಯುಕ್ತವಾದ ಮಾಹಿತಿ ದೊರೆಯಿತು. ಮುಂಚೆ ನಾವು ಈ ಬಗ್ಗೆ ತಿಳಿದುಕೊಂಡಿದ್ದರೂ ಇಲ್ಲಿ ಪ್ರಮುಖವಾಗಿ ವೃತ್ತಿ ಶಿಕ್ಷಣ ಕೋರ್ಸ್‌ಗಳ ಬಗ್ಗೆ ಗೊತ್ತಿಲ್ಲದ ಮಾಹಿತಿಯನ್ನು ಅರಿತುಕೊಂಡೆವು. 

ಎಲ್ಲರಿಗೂ ಮಾಹಿತಿ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ನ ಸಿಇಟಿ ಕೌನ್ಸೆಲಿಂಗ್ ಮಾರ್ಗದರ್ಶನ ಶಿಬಿರದಿಂದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಆಯ್ಕೆ, ಕಾಲೇಜು, ಅವಕಾಶಗಳ ಬಗ್ಗೆ ಮಹತ್ವದ ತಿಳಿವಳಿಕೆ ಪಡೆದಿದ್ದೇವೆ. ನಮ್ಮ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಪೋಷಕರು. ಇಲ್ಲಿ ನಡೆದ ಸಂವಾದದಲ್ಲಿ ಬಹುತೇಕ ಪೋಷಕರು ಕೇಳಿದ ಪ್ರಶ್ನೆಗಳು ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಯಿತು. 

ಆತಂಕ ನಿವಾರಣೆ
ಪಿಯು ಶಿಕ್ಷಣ ಪೂರೈಸಿದ ಬಳಿಕ ಬರೀ ಗೊಂದಲ ಆವರಿಸಿತ್ತು. ಅದು ಹಾಗಿರುತ್ತೆ. ಇದು ಹೀಗಿರುತ್ತೆ. ಆ ಕೋರ್ಸ್ ಸರಿ ಹೀಗೆ ಏನೇನೋ  ಕೇಳುತ್ತಿದ್ದೆವು. ತಜ್ಞರು ಸಮರ್ಪಕ ಮಾಹಿತಿ ಕಲ್ಪಿಸಿ ನಮ್ಮ ಆತಂಕ ನಿವಾರಿಸಿದ್ದಾರೆ.

ಮಾರ್ಗದರ್ಶನ
ಸಿಇಟಿ ಎಂದರೇನೇ ಒಂದು ರೀತಿ ಭಯ. ಯಾವ ವಿದ್ಯಾರ್ಥಿಗಳಿಗೂ ಸರಿಯಾಗಿ ಮಾರ್ಗದರ್ಶನ ಸಿಗುವುದಿಲ್ಲ. ಸೀನಿಯರ್ಸ್ ಕೇಳಿದರೂ ಹೇಳುವುದಿಲ್ಲ. ಓದಿನ ಜೊತೆಗೆ ಒತ್ತಡವೂ ಇರುತ್ತದೆ. ಹೀಗಾಗಿ ಆತಂಕ ಇರುತ್ತದೆ. ಈ ಮಾರ್ಗದರ್ಶನ ಶಿಬಿರದಿಂದ  ಅದು ದೂರವಾಯಿತು.

ತಾಲ್ಲೂಕಿನಲ್ಲಿ ನಡೆಯಲಿ
ಸಿಇಟಿ ಕೌನ್ಸೆಲಿಂಗ್‌ಗೆ ಹೋಗುವ ಯಾವ ರೀತಿ ಸಿದ್ಧತೆ ಮಾಡಿಕೊಂಡಿರಬೇಕು, ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳ ಆಯ್ಕೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳು, ದಾಖಲೆ ಸಲ್ಲಿಕೆ ವಿಚಾರದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಸಮರ್ಪಕ ಮಾಹಿತಿ ಲಭಿಸಿತು. ನನಗೆ ಈ ಮಾರ್ಗದರ್ಶನ ಶಿಬಿರದ ಬಗ್ಗೆ ಗೊತ್ತಿರಲಿಲ್ಲ. ಸ್ನೇಹಿತರಿಂದ ತಿಳಿದುಕೊಂಡು ಬಂದೆ. ತಾಲ್ಲೂಕು ಮಟ್ಟದಲ್ಲೂ ಇಂಥ ಮಾರ್ಗದರ್ಶನ ಶಿಬಿರ ಪ್ರಜಾವಾಣಿ ಮಾಡಲಿ.

ಹೊಯ್ದಾಟ ದೂರ
ಈ ಮಾರ್ಗದರ್ಶನ ಶಿಬಿರಕ್ಕೆ ಬರದೇ ಇದ್ದಿದ್ದರೆ ಸಿಇಟಿ ಬಗೆಗಿನ ಗೊಂದಲ, ಕೋರ್ಸ್ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಹೊಯ್ದಾಟ ಮುಂದುವರಿಯುತ್ತಿತ್ತು. ಈ ಶಿಬಿರದಿಂದ ಸಹಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.