ADVERTISEMENT

ಮುಖ್ಯಮಂತ್ರಿ ಸ್ವಾಗತಕ್ಕೆ ಎಲ್ಲ ಸಜ್ಜು

ಇಂದು ವಿವಿಧ ಕಾಮಗಾರಿಗಳಿಗೆ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 10:26 IST
Last Updated 27 ನವೆಂಬರ್ 2014, 10:26 IST

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿವಿಧ ಕಾಮಗಾರಿಯ ಶಂಕುಸ್ಥಾಪನೆಗೆ ಚಾಲನೆ ನೀಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನಕ್ಕಾಗಿ ಬೃಹತ್ ವೇದಿಕೆ ಸಜ್ಜಾಗಿದೆ.

   ಸಮಾರಂಭಕ್ಕೆ    ಸುಮಾರು 10 ಸಾವಿರ ಕಾರ್ಯಕರ್ತರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮಹಿಳೆ ಮತ್ತು ವಿಐಪಿ ಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ತಿಂಡಿ ಮತ್ತು ಕುಡಿ­ಯುವ ನೀರಿನ ವ್ಯವಸ್ಥೆ ಪೂರ್ಣ­ಗೊಂಡಿದೆ. ರಸ್ತೆ ಬದಿಗಳಲ್ಲಿ ಮುಖ್ಯಮಂತ್ರಿಯನ್ನು ಸ್ವಾಗತಿಸಲು, ಶಾಸಕ ಕೆ.ಎನ್.ರಾಜಣ್ಣ, ಸಂಸದ ಮುದ್ದ­ಹನುಮೇಗೌಡ,  ಸ್ಥಳೀಯ ಮುಖಂಡರು ಭಾವಚಿತ್ರವುಳ್ಳ ಪ್ಲೆಕ್ಸ್‌, ಬ್ಯಾನರ್‌ಗಳ ಭರಾಟೆ ಜೋರಾಗಿದೆ.

ಮುಖ್ಯಮಂತ್ರಿ ಆಗಮನಕ್ಕೆ ಹೆಲಿಪ್ಯಾಡ್ ಕೂಡ ಸಜ್ಜಾಗಿದೆ. ತಾಲ್ಲೂಕಿನ ಗಡಿ ಭಾಗವಾದ ಮಿಡಿ­ಗೇಶಿ ಹೋಬಳಿಗೆ ಪ್ರಪ್ರಥಮ ಭಾರಿಗೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿ­ರುವು­ದರಿಂದ ನಮಗೆ ಹೆಚ್ಚು ಖುಷಿಯಾಗಿದೆ ಎಂದು ಸ್ಥಳೀಯ­ರಾದ ಗೋವಿಂದ­ರಾಜು ಹೇಳುತ್ತಾರೆ.

ಪೊಲೀಸ್ ಬಿಗಿ ಬಂದೊಬಸ್ತ್:  ಮಿಡಿ­ಗೇಶಿ ಗ್ರಾಮಕ್ಕೆ ಮುಖ್ಯಮಂತ್ರಿ ಆಗ­ಮಿಸುತ್ತಿ­ರುವ ಹಿನ್ನೆಲೆಯಲ್ಲಿ ಗ್ರಾಮದ ಸುತ್ತ-ಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಒಟ್ಟು  ೪೦೦ ಪೊಲೀಸರು ಭದ್ರತೆಗೆ ನಿಯೋಜಿ­ಸ­ಲಾಗಿದೆ.  ಮಳವಳ್ಳಿ-–ಪಾವಗಡ ಅಂತ­ರ ರಾಜ್ಯ ಸಂಪರ್ಕ ಕಲ್ಪಿಸುವ 576 ಕೋಟಿ ವೆಚ್ಚದ ರಸ್ತೆ ಕಾಮಗಾರಿ , ಮಧುಗಿರಿ ಸಮೀಪ ವಡೇರಹಳ್ಳಿ­ಯಲ್ಲಿ 6.35 ಎಕರೆ ವಿಸ್ತೀರ್ಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ಡಿಪೋ, ಬಡವನಹಳ್ಳಿ ಮೊರಾ­ರ್ಜಿ ವಸತಿ ಶಾಲೆ, ಬೇಡ­ತ್ತೂರು ಕಿತ್ತೂರು ರಾಣಿ ಚೆನ್ನಮ್ಮ  ವಸತಿ ಶಾಲೆ ಶಂಕುಸ್ಥಾಪನೆ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.