ADVERTISEMENT

ರಕ್ಷಣೆಗೆ ಮಾತ್ರ ಬಂದೂಕು ಬಳಸಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:51 IST
Last Updated 8 ನವೆಂಬರ್ 2017, 9:51 IST

ಕುಣಿಗಲ್: ‘ಖಾಸಗಿ ಪ್ರತಿ ರಕ್ಷಣಾ ಹಕ್ಕು ಚಲಾವಣೆಯ ಉದ್ದೇಶದಿಂದ ದೇಶದ ನಾಗರಿಕರು ತಮ್ಮ ಪ್ರಾಣ ಮತ್ತು ಆಸ್ತಿ ರಕ್ಷಣೆಗೆ ಬಂದೂಕು ಉಪಯೋಗಿಸಬಹುದು’ ಎಂದು ನ್ಯಾಧೀಶರಾದ ಶ್ರೀ ಕೃಷ್ಣ ತಿಳಿಸಿದರು. ಕುಣಿಗಲ್ ಪೊಲೀಸ್ ವೃತ್ತದ ವತಿಯಿಂದ ಹಮ್ಮಿಕೊಳ್ಳಲಾದ ನಾಗರಿಕರಿಗೆ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ದೇಶದ ರಕ್ಷಣೆ ಪ್ರತಿ ನಾಗರಿಕನ ಕರ್ತವ್ಯವಾಗಿದೆ. ಸಮಬಾಳ್ವೆಗೆ ಸಹಕಾರಿಯಾಗಿ ಜೀವನ ನಡೆಸಬೇಕಿದೆ. ದ್ವೇಷ ಅಸೂಯೆಗಳಿಗೆ ಬಂದೂಕ ದುರುಪಯೋಗವಾಗದಂತೆ ಎಚ್ಚರವಹಿಸಬೇಕು’ ಎಂದರು.

ಸಿಪಿಐ ಬಾಳೆಗೌಡ ಮಾತನಾಡಿ, ‘ತಾಲ್ಲೂಕಿನ ನಾಗರಿಕರ ಬೇಡಿಕೆಯಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆದು ನಾಗರಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ನಡೆಯುತ್ತಿರುವ 54 ನೇ ಶಿಬಿರವಾಗಿದೆ. ತರಬೇತಿ ಪ್ರಮಾಣ ಪತ್ರ ಪಡೆಯದೆ ಬಂದೂಕು ಪರವಾನಗಿ ಪಡೆಯಲು ಸಾಧ್ಯವಿಲ್ಲ. ಹತ್ತು ದಿನಗಳ ಶಿಬಿರದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನೂರು ನಾಗರಿಕರಿಗೆ ತರಬೇತಿ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.