ADVERTISEMENT

ವಿಮಾನ ಮಾದರಿ ಪ್ರದರ್ಶನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:11 IST
Last Updated 16 ಏಪ್ರಿಲ್ 2017, 5:11 IST

ತುಮಕೂರು: ಸಿದ್ದಗಂಗಾ ತಾಂತ್ರಿಕ ಕಾಲೇಜಿನ ಮೈದಾನದಲ್ಲಿ ಎರಡು ದಿನ ನಡೆದ ವಿದ್ಯಾರ್ಥಿಗಳು ತಯಾರಿಸಿದ ವಿಮಾನ ಮಾದರಿಗಳ ಪ್ರದರ್ಶನಕ್ಕೆ ಶನಿವಾರ ತೆರೆ ಬಿದ್ದಿತು.ರೆಗ್ಯೂಲರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮುಂಬೈ ವಿವಾ ತಾಂತ್ರಿಕ ಕಾಲೇಜು ತಂಡಕ್ಕೆ  ಪ್ರಶಸ್ತಿಯೊಂದಿಗೆ ಬಹುಮಾನದ ಮೊತ್ತ ₹ 50 ಸಾವಿರವನ್ನು ಬೆಂಗಳೂರಿನ ಎ.ಎಸ್.ಎಂ.ಟೆಕ್ನಾಲಜಿಯ ಮುಖ್ಯಸ್ಥ ಲಕ್ಷ್ಮಿನಾರಾಯಣ್ ವಿತರಿಸಿದರು.

ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ  ₹ 25 ಸಾವಿರ, ತೃತೀಯ ಸ್ಥಾನ ಪಡೆದ ಪುಣೆಯ ವಿಶ್ವಕರ್ಮ ತಾಂತ್ರಿಕ ವಿದ್ಯಾಲಯಕ್ಕೆ  ₹ 10 ಸಾವಿರ ಬಹುಮಾನ ನೀಡಲಾಯಿತು. ಮೈಕ್ರೊ ಎಲೆಕ್ಟ್ರಿಕ್ ಮೋಟಾರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಪಿಇಎಸ್ಐಟಿ ತಾಂತ್ರಿಕ ಕಾಲೇಜಿಗೆ ಬೆಂಗಳೂರಿನ ಬೋಯಿಂಗ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಾಲಾ ಭಾರದ್ವಾಜ್ ಅವರು ಪ್ರಶಸ್ತಿಯೊಂದಿಗೆ ಬಹುಮಾನದ ಮೊತ್ತ ₹ 50 ಸಾವಿರ  ನೀಡಿದರು.

ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯ ತಂಡಕ್ಕೆ ₹ 25 ಸಾವಿರ, ತೃತೀಯ ಸ್ಥಾನ ಪಡೆದ ಭೂಪಾಲ್‌ನ ಟೆಕ್ನೋ ತಾಂತ್ರಿಕ ಕಾಲೇಜಿಗೆ ಬಹುಮಾನದ ಮೊತ್ತ ₹ 10 ಸಾವಿರ ವಿತರಿಸಲಾಯಿತು.‘ಮನೋವೇಗಂ’ ಸಂಚಾಲಕ ದಾಮೋದರನ್ ಸುಬ್ರಹ್ಮಣ್ಯ ಮಾತನಾಡಿ, ‘ ಗೆಲುವಿನ ತಂಡಕ್ಕೆ ಉಚಿತವಾಗಿ ಏರೋ ಮಾಡೆಲಿಂಗ್ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

ಬೆಂಗಳೂರಿನ ಎಸ್ಎಇ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೆ.ಮುನಿರತ್ನಂ, ಡಾ.ಬಾಲ ಭಾರದ್ವಾಜ್, ಲಕ್ಷ್ಮಿನಾರಾಯಣ, ಎಸ್‌ಐಟಿಕಾಲೇಜಿನ ನಿರ್ದೇಶಕ ಎಂ.ಎನ್.ಚನ್ನಬಸಪ್ಪ, ಸಂಯೋಜಕ ಸತ್ಯಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.