ADVERTISEMENT

ಅನಿರ್ದಿಷ್ಟಾವಧಿ ಮುಷ್ಕರ ಅರಂಭ

ಅಕ್ರಮ ಭೂಮಿ ಸಕ್ರಮ, ನಿವೇಶನ ವಿತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 5:57 IST
Last Updated 28 ಅಕ್ಟೋಬರ್ 2014, 5:57 IST

ಉಡುಪಿ: ಅಕ್ರಮ ಭೂಮಿಯನ್ನು ಸಕ್ರಮ ಮಾಡುವಂತೆ, ನಿವೇಶನ ರಹಿ ತರಿಗೆ ನಿವೇಶನ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲ್ಲೂಕು ಸಮಿತಿ ನಗರದ ತಹಶೀಲ್ದಾರ್ ಕಚೇರಿ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.

ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜು, ಅಕ್ರಮ ಭೂಮಿ ಸಕ್ರಮ ಮಾಡುವಂತೆ ಮತ್ತು ಬಡವರಿಗೆ ಉಚಿತ ನಿವೇಶನ ನೀಡುವಂತೆ ಆಗ್ರಹಿಸಿ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೂ ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಬಡವರು, ಕೂಲಿಕಾರ್ಮಿಕರು ಮತ್ತು ಬಡ ರೈತರ ಪರವಾದ ನಿಲುವು ತೆಗೆದುಕೊಳ್ಳುತ್ತಿಲ್ಲ. ಬಗರ್‌ ಹುಕುಂ ಸೇರಿದಂತೆ ಎಲ್ಲ ರೀತಿಯ ಅಕ್ರಮ ಸಾಗುವಳಿ ಭೂಮಿ ಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

‘ಎರಡೂ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿ ಗಳ ಪರವಾಗಿ ಕೆಲಸ ಮಾಡುತ್ತಿವೆ. ಸ್ವದೇಶಿ ಮಂತ್ರ ಜಪಿಸುವ ಬಿಜೆಪಿ ಸರ್ಕಾರ ಅಮೆರಿಕ, ಜಪಾನ್‌ ದೇಶ ಗಳ ಬಂಡವಾಳದಿಂದ ಅಭಿವೃದ್ಧಿ ಮಾಡುವ ಕನಸು ಕಾಣು ತ್ತಿದೆ. ದೇಶದ ಅಭಿವೃದ್ಧಿಯಾಗ ಬೇಕಾದರೆ ಬಡ ವರು, ರೈತರು, ಕೂಲಿ ಕಾರ್ಮಿಕರ ಪರವಾದ ನಿಲುವು ಕೈಗೊಳ್ಳಬೇಕು. ಬಡವರಿಗೆ ಕನಿಷ್ಠ ಐದು ಗುಂಟೆ ನಿವೇಶನ ನೀಡಿದರೆ ಮನೆ ಕಟ್ಟಿಕೊಂಡು ಉಳಿದ ಜಾಗ ದಲ್ಲಿ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮಾಡು ತ್ತಾರೆ. ಇದರಿಂದ ರಾಷ್ಟ್ರೀಯ ಉತ್ಪನ್ನ ಗಣನೀಯ ವಾಗಿ ಹೆಚ್ಚಳವಾಗುತ್ತದೆ’ ಎಂದು ಪ್ರತಿಪಾದಿಸಿದರು.

ಬಗರ್‌ಹುಕುಂ ಸಾಗುವಳಿದಾರರಿಗೆ ಪಟ್ಟಾ ಹಕ್ಕು ನೀಡಿ, ನಿವೇಶನ ಹಂಚಿಕೆಯಲ್ಲಿ ಭ್ರಷ್ಟಚಾರ ಬೇಡ, ರೈತ ರನ್ನು ಒಕ್ಕಲೆಬ್ಬಿಸಬೇಡಿ ಮುಂತಾದ ಘೋಷಣೆಗಳನ್ನು ಧರಣಿ ನಿರತರು ಕೂಗಿದರು.

ಸಂಘದ ಅಧ್ಯಕ್ಷ ಎಚ್‌. ವಿಠಲ್‌, ಕಾರ್ಯದರ್ಶಿ ಕೆ. ಲಕ್ಷ್ಮಣ್‌, ಮುಖಂಡರಾದ ಬಾಲಕೃಷ್ಣಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.