ADVERTISEMENT

ಆನೆಗುಂದಿ ಮಠಕ್ಕೆ ಬಸ್‌ ಸಂಪರ್ಕ ಆರಂಭ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 8:47 IST
Last Updated 12 ಜುಲೈ 2017, 8:47 IST

ಶಿರ್ವ: ಪಡುಕುತ್ಯಾರು ಆನೆಗುಂದಿ ಮಠಕ್ಕೆ ನೂತನವಾಗಿ ಸಂಚಾರ ಆರಂಭಿಸಿದ ನರ್ಮ್ ಬಸ್‌ಗೆ ಕಟಪಾಡಿಯ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ  ಪಡುಕುತ್ಯಾರು ಆನೆಗುಂದಿ ಮಠದ ಬಳಿ  ಈಚೆಗೆ ಪೂಜೆಸಲ್ಲಿಸಿದರು.

ಉಡುಪಿ, ಕಾಪು, ಮಜೂರು, ಪಕೀರನಕಟ್ಟೆ, ಬೆಳಪು, ಜ್ಯೋತಿನಗರ, ಇರಂದಾಡಿ, ಪಡುಕುತ್ಯಾರು-ಆನೆಗುಂದಿ ಮಠಕ್ಕೆ ಭಕ್ತರನ್ನು, ಪ್ರಯಾಣಿಕರನ್ನು ಕರೆತರುವ ಬಸ್‌ ವ್ಯವಸ್ಥೆ ಕಲ್ಪಿಸಲು ಶ್ರಮ ವಹಿಸಿದವರೆಲ್ಲರಿಗೂ ಶ್ರೇಯಸ್ಸು ಉಂಟಾಗಲಿ ಎಂದರು. ಉಡುಪಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.15ರಿಂದ ಪ್ರಾರಂಭವಾಗಿ ರಾತ್ರಿ 8 ಗಂಟೆಯವರೆಗೆ ಉಡುಪಿ– ಪಡುಕುತ್ಯಾರು ಮಧ್ಯೆ 2 ಬಸ್‌ಗಳು ಒಟ್ಟು 5 ಬಾರಿ  ಸಂಚರಿಸಲಿವೆ.

ಪ್ರತಿಷ್ಠಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷರಾದ ಮಂಗಳೂರು ಕೆ.ಕೇಶವ ಆಚಾರ್ಯ, ಪ್ರತಿಷ್ಠಾನದ ಕಾರ್ಯದರ್ಶಿ ಲೋಕೇಶ್ ಆಚಾರ್, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಕಾಡಬೆಟ್ಟು ನಾಗರಾಜ ಆಚಾರ್ಯ,ಗಂಗಾಧರ ಆಚಾರ್ಯ  ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.