ADVERTISEMENT

ಆಸ್ತಿಕತೆ ಭೌತಿಕ ಪದವಿಗಿಂತ ಶ್ರೇಷ್ಠ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:04 IST
Last Updated 21 ಏಪ್ರಿಲ್ 2017, 7:04 IST
ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿರುವ ಸಂತ ಸಂದೇಶ ಮಾಲಾ ಸರಣಿ ಕಾರ್ಯಕ್ರಮದ ಗುರುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠ ಸಂಸ್ಥಾನದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಪ್ರಜಾವಾಣಿ ಚಿತ್ರ
ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿರುವ ಸಂತ ಸಂದೇಶ ಮಾಲಾ ಸರಣಿ ಕಾರ್ಯಕ್ರಮದ ಗುರುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠ ಸಂಸ್ಥಾನದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ಆಸ್ತಿಕತೆ ಭೌತಿಕವಾದ ಪದವಿಗಳಿಗಿಂತಲೂ ಶ್ರೇಷ್ಠವಾದುದು’ ಎಂದು ಹುಬ್ಬಳ್ಳಿ ಮೂರುಸಾವಿರ ಮಠ ಸಂಸ್ಥಾನದ ಗುರುಸಿದ್ಧ ರಾಜ ಯೋಗೀಂದ್ರ ಸ್ವಾಮೀಜಿ ಹೇಳಿದರು. ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಗರದ ರಾಜಾಂಗಣದಲ್ಲಿ ಆಯೋಜಿ ಸಿರುವ ಸಂತ ಸಂದೇಶ ಮಾಲಾ ಸರಣಿ ಕಾರ್ಯಕ್ರಮದ ಗುರುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾ ಡಿದರು. 

‘ಆಧ್ಯಾತ್ಮಿಕ ಎನ್ನುವುದು ದೇಶದ ಸಂಪತ್ತು. ಅದು ಪ್ರತಿಯೊಬ್ಬ ವ್ಯಕ್ತಿಯ ಆಜನ್ಮ ಸಿದ್ಧ ಹಕ್ಕು ಕೂಡ ಆಗಿದೆ. ಆಧ್ಯಾತ್ಮಿಕತೆಯ ಪ್ರಭಾವದಿಂದಾಗಿಯೇ ನಮ್ಮ ದೇಶ ಶಾಂತ ಹಾಗೂ ಸಮೃದ್ಧವಾಗಿದೆ’ ಎಂದರು.ದೇಶದ ಜನರಲ್ಲಿ ಬಹಳಷ್ಟು ಆಸ್ತಿಕತೆ ಇದೆ. ಅದರ ಪ್ರಭಾವ ಎಷ್ಟಿದೆ ಎಂದರೆ ಭಾರತದ ಜನ ಸಂಖ್ಯೆಯನ್ನು ಗಮನಿಸಿದಾಗಲೇ ತಿಳಿಯುತ್ತದೆ. ಆದರೆ, ದೇವರು ಎಷ್ಟಿದ್ದಾರೆ ಎನ್ನುವ ಲೆಕ್ಕ ಸಿಗುವುದಿಲ್ಲ. ಕೆಲವರು ಶೂನ್ಯದಲ್ಲಿ ದೇವರನ್ನು ಕಂಡರೆ, ಇನ್ನು ಕೆಲವರು ಸ್ಥಾವರದಲ್ಲಿ ದೇವರ ಅಸ್ತಿತ್ವವನ್ನು ಕಂಡುಕೊಂಡಿದ್ದಾರೆ’ ಎಂದು ಅಭಿಪ್ರಾ ಯಪಟ್ಟರು. 

‘ಸಂತರು ಶ್ರೇಷ್ಠರು. ಅವರು ಕಲ್ಲು ಹೃದಯವನ್ನು ಸಾತ್ವಿಕಗೊಳಿಸುವ ತ್ಯಾಗದ ಗುಣವನ್ನು ಹೊಂದಿದ್ದಾರೆ. ಇಂತಹ ಪರಂಪರೆಯಲ್ಲಿ ಹುಟ್ಟಿದವರು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ. ಅವರು ಕೇವಲ ನಾಡಿನ ಅಥವಾ ರಾಷ್ಟ್ರದ ಸಂತರಾಗಿಲ್ಲ, ಇಡೀ ಜಗತ್ತಿನ ಸಂತರು’ಎಂದು ಹೇಳಿದರು.ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಸಂತರಿಗೆ ರಾಜಕಾರಣಿಗಳಿಗಿಂತ ಮಿಗಿ ಲಾದ ಸ್ಥಾನವನ್ನು ಕೊಡಬೇಕು. ಆಗ ಮಾತ್ರ ಭಾರತ ಸದೃಢವಾಗಿ ಬೆಳೆಯಲು ಸಾಧ್ಯ. ಅದಕ್ಕಾಗಿ ಎಲ್ಲ ಸಂತರು ಒಂದಾಗಿ ರಾಷ್ಟ್ರವನ್ನು ಆಧ್ಯಾತ್ಮಿಕತೆ ಮತ್ತು ನೈತಿಕತೆ ನೆಲೆಯಲ್ಲಿ ನಿರ್ಮಿಸಲು ಮುಂದಾಗಬೇಕು’ ಎಂದರು.ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.