ADVERTISEMENT

ಇಂದು ಸೂಪರ್ ಮೂನ್ ಸಂಡೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 5:18 IST
Last Updated 3 ಡಿಸೆಂಬರ್ 2017, 5:18 IST

ಉಡುಪಿ: ಹುಣ್ಣಿಮೆಯ ದಿನವಾದ ಇಂದು (ಡಿ.3) ಚಂದ್ರ ಇನ್ನಷ್ಟು ಹತ್ತಿರ ದಲ್ಲಿ ಹಾಗೂ ಹೆಚ್ಚು ಪ್ರಭೆಯೊಂದಿಗೆ ಗೋಚರಿಸಲಿದ್ದಾನೆ ಎಂದು ಪೂರ್ಣ ಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ. ಭಟ್ ತಿಳಿಸಿದ್ದಾರೆ.

ಎಲ್ಲ ಹುಣ್ಣಿಮೆಯಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಗೋಚರಿಸುವುದಿಲ್ಲ. ಕೆಲವೊಮ್ಮೆ ಸ್ವಲ್ಪ ಚಿಕ್ಕದಾಗಿ, ಇನ್ನೂ ಕೆಲವೊಮ್ಮೆ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ. ಚಿಕ್ಕದಾಗಿದ್ದಾಗ ಬೆಳದಿಂಗಳ ಪ್ರಭೆ ಕಡಿಮೆ ಇರುತ್ತದೆ. ಅಂತೆಯೇ ದೊಡ್ಡದಾಗಿದ್ದಾಗ ಭವ್ಯ ಬೆಳದಿಂಗಳಿರುತ್ತದೆ.

ಇದಕ್ಕೆಲ್ಲ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುವ ಪಥ. ಅದು ವೃತ್ತಾಕಾರವಲ್ಲ. ದೀರ್ಘ ವೃತ್ತಾಕಾರ. ಈ ದೀರ್ಘ ವೃತ್ತದಲ್ಲಿ ಒಮ್ಮೆ ಸಮೀಪ ದೂರ (ಪೆರಿಜೀ), ಅಂತೆಯೇ ಒಮ್ಮೆ ದೂರದ ದೂರ (ಅಪೋಜೀ) ಬರುವುದಿದೆ.

ADVERTISEMENT

ಚಂದ್ರ– ಭೂಮಿಯ ಸರಾಸರಿ ದೂರ 3,84,000 ಕಿ.ಮೀ. ಆದರೆ ಪೆರಿಜೀಗೆ ಬಂದಾಗ 3,56,000 ಕಿ.ಮೀ. ದೂರದಲ್ಲಿ ಇರುತ್ತದೆ. ಆಪೋಜೀಗೆ ಬಂದಾಗ 4,06,000 ಕಿ.ಮೀ ಇರುತ್ತದೆ. ಇಂದು ಚಂದ್ರ 3,57,492 ಕಿ.ಮೀ ದೂರದಲ್ಲಿ ಗೋಚರಿಸುವನು. ಹಾಗಾಗಿ, ಚಂದ್ರ ಹೆಚ್ಚಿನ ಪ್ರಭೆಯಲ್ಲಿ ದೊಡ್ಡದಾಗಿ ಕಾಣಿಸುವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.