ADVERTISEMENT

ಉಪ್ಪೂರು: ಬಿಜೆಪಿ ಕಾರ್ಯಕಾರಿಣಿ ಸಭೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:00 IST
Last Updated 23 ಮೇ 2017, 6:00 IST

ಉಪ್ಪೂರು(ಬ್ರಹ್ಮಾವರ) : ಉಡುಪಿ ವಿಧಾನ ಕ್ಷೇತ್ರ  ವ್ಯಾಪ್ತಿಯ ಗ್ರಾಮಾಂತರ ಬಿಜೆಪಿ ಕಾರ್ಯಕಾರಿಣಿ ಸಭೆ ಉಪ್ಪೂರಿನಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ಕರಾವಳಿ ಜಿಲ್ಲೆಯ ಮರಳುಗಾರಿಕೆ ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಸಿಕೊಡದ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕಾಮಗಾರಿಗಳ ಬಗ್ಗೆ ಅಪಪ್ರಚಾರ ನೀಡುವ ಸಚಿವರ ಕಾರ್ಯವೈಖರಿಯ ಬಗ್ಗೆ ಭಾರಿ ಖಂಡನೆ ವ್ಯಕ್ತವಾಯಿತು.

ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ ‘ಸಚಿವರು ಬಿ.ಜೆ.ಪಿ ಸದಸ್ಯರಿಗೆ ಮತ್ತು ಅವರ ಮಾತುಗಳಿಗೆ ಬೆಲೆ ನೀಡುತ್ತಾ ಇಲ್ಲ. ಪಂಚಾಯಿತಿಗಳಿಗೆ ಟ್ಯಾಂಕರ್‌ ಮೂಲಕ ನೀಡಲಾಗುತ್ತಿರುವ ನೀರು ವೈಯಕ್ತಿಕ ಕೊಡುಗೆ ಅಲ್ಲದಿದ್ದರೂ, ಟ್ಯಾಂಕರ್‌ನಲ್ಲಿ ಸಚಿವರ ಬ್ಯಾನರ್‌ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ.

ಇದು ಸರಿಯಲ್ಲ. ಸಚಿವರ ಈ ಎಲ್ಲ ವರ್ತನೆಯ ಬಗ್ಗೆ ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಲಾಗುವುದು’ ಎಂದರು. ಗ್ರಾಮಾಂತರ ಬಿ.ಜೆ.ಪಿಯ ಅಧ್ಯಕ್ಷ ಪ್ರತಾಪ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಯಶಪಾಲ್ ಸುವರ್ಣ.

ADVERTISEMENT

ಹರಿಮಕ್ಕಿ ರತ್ನಾಕರ ಶೆಟ್ಟಿ, ಜ್ಞಾನವಸಂತ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸುಕೇಶ್ ನಾಯ್ಕ ಕೊಯ್‌ಲಾಡಿ, ಶೀಲಾ ಕೆ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು. ರಾಜೀವ ಕುಲಾಲ ಸ್ವಾಗತಿಸಿದರು. ಕಮಲಾಕ್ಷ ಹೆಬ್ಬಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.