ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 13 ಮೇ 2017, 7:28 IST
Last Updated 13 ಮೇ 2017, 7:28 IST

ಕಾರ್ಕಳ: ರಾಜ್ಯದ ಪ್ರೌಢ ಶಿಕ್ಷಣ ಇಲಾಖೆ ಶುಕ್ರವಾರ ಪ್ರಕಟಿಸಿದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲ್ಲೂಕಿನ ಹಲವು ಶಿಕ್ಷಣ ಸಂಸ್ಥೆಗಳು ಉತ್ತಮ ಸಾಧನೆ ಮೆರಿದಿವೆ. ನಗರದ ಗಾಂಧಿ ಮೈದಾನದಲ್ಲಿರುವ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಶೇ 100 ಫಲಿತಾಂಶ ಪಡೆದು ಕೊಂಡಿದೆ. ಸಂಸ್ಥೆ ಯಿಂದ ಒಟ್ಟು 82 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.  

ಸಂಸ್ಥೆ 32 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 48 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಿನ್ಸನ್ ಫೆರ್ನಾಂಡಿಸ್ 619 ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನ ಪಡೆದರೆ, ಗೌಸಿಯಾ 615, ರೀನಲ್ ಸೋನಿ ಪಿಂಟೊ 610, ವಿಲ್ಸಿಟಾ ಸ್ನೇಹಲ್ ಡಿ’ಸೋಜ 609, ಲೀಜನ್ ಪಿರೇರಾ 609, ವೀನಲ್ ಶೈನಿ ಡಿ’ಸೋಜ 608, ಏಂಜೆಲಾ ಸನ್ನಿ 607, ಅಂಜನಿ ಜೆ 604, ಆಸ್ಟನ್ ಲೋಬೋ 603 ಅಂಕ ಪಡೆದಿದ್ದಾರೆ.

ತಾಲ್ಲೂಕಿನ ಕುಕ್ಕುಂದೂರು ಜಾನನ ಸುಧಾ ಆಂಗ್ಲಮಾಧ್ಯಮ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವು ಶೇ100  ಫಲಿತಾಂಶ ದಾಖಲಿಸಿದೆ. ಸಂಸ್ಥೆ ಅನುಶ್ರೀ ಡಿ.ಪೂಜಾರಿ 620, ಸವಿತಾ ಶೆಣೈ 619, ಆಕೃತಿ ಅ.ದೇವಾಡಿಗ 618 ಅಂಕ ಪಡೆದಿದ್ದಾರೆ. ತಾಲ್ಲೂಕಿನ ನಿಟ್ಟೆ ಶಂಕರ ಅಡ್ಯಂತಾಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ದುರ್ಗಾ ಶೆಣೈ 609 ಅಂಕ ಗಳಿಸಿ ಸಂಸ್ಥೆಗೆ ಮೊದಲಿ ಗಳೆನಿಸಿದ್ದಾಳೆ. 

ADVERTISEMENT

ತಾಲ್ಲೂಕಿನ ಸೇಂಟ್ ಜೋಸೆಫ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 38 ಮಂದಿ ವಿದ್ಯಾರ್ಥಿಗಳಲ್ಲಿ 32 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 84.21 ಫಲಿತಾಂಶ ದಾಖಲಾಗಿದೆ. ಮೂವರು ಅತ್ಯುನ್ನತ ಶ್ರೇಣಿ, ಆರು ಮಂದಿ ಉನ್ನತ ಶ್ರೇಣಿ ಪಡೆದಿದ್ದು ಶೈಲಶ್ರೀ 599 ಅಂಕಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾಳೆ.  

ಸೇಂಟ್ ಜೋಸೆಫ್ ಆಂಗ್ಲ ಮಾಧ್ಯ ಮ ಶಾಲೆ 30 ಮಂದಿ ವಿದ್ಯಾರ್ಥಿಗಳಲ್ಲಿ 26 ಮಂದಿ ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು,  ಶೇ. 86.6 ಫಲಿತಾಂಶ ದಾಖಲಾಗಿದೆ. ಚೈತ್ರಾ 563 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.