ADVERTISEMENT

ಕಾಪು ತಾಲ್ಲೂಕು ಕೇಂದ್ರ: ಏಪ್ರಿಲ್ 22ಕ್ಕೆ ಸಿಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 6:14 IST
Last Updated 27 ಮಾರ್ಚ್ 2017, 6:14 IST
ಕಾಪು (ಪಡುಬಿದ್ರಿ): ಕಾಪು ತಾಲ್ಲೂಕು ಕೇವಲ ಘೋಷಣೆ ಅಲ್ಲ. ಅದರ ಉದ್ಘಾ ಟನಾ ಸಮಾರಂಭವನ್ನು ಏಪ್ರಿಲ್ 22ಕ್ಕೆ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಮನವಿ ಮಾಡಲಾ ಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು. 
 
ಕಾಪು ತಾಲ್ಲೂಕು ಘೋಷಣಾ ಸಂಭ್ರ ಮಾಚರಣೆಯ ಪ್ರಯುಕ್ತ ಕಾಪುವಿನ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭ ವನದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅಭಿನಂ ದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಆ ದಿನ ಕಂದಾಯ ಸಚಿವರ ಉಪಸ್ಥಿತಿಯಲ್ಲಿ ಕಾಪು ತಾಲ್ಲೂಕನ್ನು ಮುಖ್ಯಮಂತ್ರಿಗಳು ಉದ್ಘಾಟನೆ ನಡೆ ಸುವ  ಯೋಜನೆ ರೂಪಿಸಲಾಗಿದೆ ಎಂದರು. 
 
ಕಾಪು ತಾಲ್ಲೂಕು ಕೇಂದ್ರವೆಂದು ರಾಜ್ಯ ಸರ್ಕಾರ ಘೋಷಣೆ ಮಾಡುವ ಮೂಲಕ ಕಾಪುವಿಗೆ ವಿಶೇಷ ಮಾನ್ಯ ತೆಯ ಜೊತೆಗೆ ವಿಶೇಷ ಗುರುತು ಪ್ರಾಪ್ತ ವಾಗಿದೆ. ಸಮಗ್ರ ಪ್ರಗತಿಯ ಮೂಲಕ ಕಾಪುವನ್ನು ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಗುರಿಯಾಗಬೇಕು. 
 
ಅಭಿವೃದ್ಧಿಗೆ ಪರಿಣಾಮಕಾರಿ ವೇಗ ನೀಡಬೇಕಾದಲ್ಲಿ ಕಾಪುವನ್ನು ಪುರಸಭೆ ಮತ್ತು ತಾಲ್ಲೂಕು ಆಗಿ ಪರಿವರ್ತಿಸು ವುದು ನನ್ನ ಕನಸಾಗಿತ್ತು. ಆ ನಿಟ್ಟಿನಲ್ಲಿ ಸರ್ವ ಪಕ್ಷ, ಸ್ಥಳೀಯ ಜನ ಪ್ರತಿನಿಧಿ ಗಳೊಂದಿಗೆ ಗ್ರಾಮ ಮಟ್ಟದಲ್ಲಿ ಅಭಿ ಪ್ರಾಯವನ್ನು ಪಡೆದು ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಿ ಸರ್ಕಾರದ ಮುಂದೆ ಪ್ರಸ್ತಾಪ ಇಡಲಾಗಿತ್ತು. ಆರಂಭದಲ್ಲಿ ವಿರೋಧಿಗಳು ಕಾಪು ತಾಲ್ಲೂಕು ಕೇವಲ ಘೋಷಣಾ ಗಿಮಿಕ್ ಹೇಳಿದ್ದರು. ಆದರೆ ಇವತ್ತು ವಿರೋಧಿಗಳಿಗೆ ದೊಡ್ಡ ಆಘಾತ ನೀಡಿದಂಥಾಗಿದೆ. 
 
ವಿವಿಧ ಯೋಜನೆಗಳು: ಪ್ರಸಕ್ತ ಆರ್ಥಿಕ ವರ್ಷದಲ್ಲಿ 6 ಸಾವಿರ ಮನೆಗ ಳನ್ನು, ಕಾಪು ಪುರಸಭಾ ವ್ಯಾಪ್ತಿಯೊಳಗೆ 1 ಸಾವಿರ ಫ್ಲ್ಯಾಟ್‌ಗಳನ್ನು ನಿವೇಶನ ರಹಿ ತರಿಗೆ ನೀಡುವ ಗುರಿ ಇದೆ. ಕಾಪು-ಶಿರ್ವ, ಕಟಪಾಡಿ-ಶಿರ್ವ, ನಂದಿಕೂರು- ಶಿರ್ವ, ಒಂತಿಬೆಟ್ಟು- ಆತ್ರಾಡಿ-ಕುಂಜಾರುಗಿರಿ ಸಂಪರ್ಕ ರಸ್ತೆಯನ್ನು ದ್ವಿಪಥಗೊಳಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ಸಿಕ್ಕಿದೆ.
 
7 ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. 2 ಹೊಸ ಸೇತು ವೆಗಳ ನಿರ್ಮಾಣಕ್ಕೂ ಪ್ರಸ್ತಾಪ ಸಲ್ಲಿಸಲಾ ಗಿದೆ. ಸೈನ್ಸ್ ಸೆಂಟರ್ ನಿರ್ಮಾಣಕ್ಕೆ 50 ಕೋಟಿ ಬಿಡುಗಡೆಯಾಗಿದೆ. ಹೆಜಮಾಡಿ ಬಂದರು ರಚನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದರು. 
 
ಕಾಪು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಕಾಪು ಲೀಲಾಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾಪು ಜುಮ್ಮಾ ಮಸೀದಿ ಧರ್ಮಗುರುಗಳಾದ ಇರ್ಷಾದ್ ಸಅದಿ, ಶಿರ್ವ ಚರ್ಚ್‌ ಧರ್ಮ ಗುರು ರೆ.ಫಾ. ಸ್ಟ್ಯಾನಿ ತಾವ್ರೋ, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಕೇಂಜ ಶ್ರೀಧರ ತಂತ್ರಿ, ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಮಾತನಾಡಿದರು. 
 
ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯಾ ಸಂಜೀವ, ವಾಸುದೇವ ಶೆಟ್ಟಿ, ಮನೋ ಹರ್ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ, ಬಾಲಾಜಿ, ಸುಧೀರ್ ಹೆಗ್ಡೆ, ಮೋಹನ ಬಂಗೇರ, ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಶ್ರೀಧರ ಶೆಣೈ, ಶ್ರೀಕರ ಕರ್ಕೇರ, ಗೀತಾ ವಾಗ್ಳೆ, ವಿಲ್ಸನ್ ರೋಡ್ರಿಗಸ್, ಅಶೋಕ್ ಸುವರ್ಣ, ನವೀನ್ಚಂದ್ರ ಜೆ. ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ವಿನಯಕುಮಾರ್ ಸೊರಕೆಯ ಅವರನ್ನು ಕಾಪು ಪೇಟೆಯಿಂದ ವಿವಿಧ ವೇಷ, ವಾದ್ಯ ಘೋಷಗಳೊಂದಿಗೆ ಭವ್ಯವಾದ ಮೆರವಣೆಗೆಯ ಮೂಲಕ ಸಭಾ ಭವನಕ್ಕೆ ಕರೆತರಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.