ADVERTISEMENT

ಕಾಲೇಜುಗಳಲ್ಲಿ ಎನ್‌ಎಸ್‌ಎಸ್‌ ಕಡ್ಡಾಯವಾಗಲಿ: ಎ.ಜಿ. ಕೊಡ್ಗಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 6:17 IST
Last Updated 28 ಡಿಸೆಂಬರ್ 2016, 6:17 IST

ಉಡುಪಿ: ದೇಶದಲ್ಲಿ ಭ್ರಷ್ಟಾಚಾರ ಹೆಚ್ಚು ತ್ತಿದೆ. ಜಾತಿಯ ವಿಷ ವೃಕ್ಷವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ಆತಂಕ ವ್ಯಕ್ತಪಡಿಸಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕ ಅಮಾಸೆಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಗೌರವ ಹೆಚ್ಚಿಸಿದ ನಮ್ಮ ಸಂಸ್ಕೃತಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಅಳಿವಿನ ಅಂಚಿನಲ್ಲಿದೆ. ಶಿಕ್ಷಣ ಕೇವಲ ನಾಲ್ಕು ಗೋಡೆಗಳ ನಡುವಿಗಷ್ಟೇ ಸೀಮಿತ ಎಂಬ ಭಾವನೆ ಬೆಳೆಯುತ್ತಿದೆ. ಯುವಜನರಲ್ಲಿ ನೈತಿಕ ಸ್ಥೈರ್ಯ ಹಾಗೂ ಸ್ವಾಭಿಮಾನ ವನ್ನು ಬೆಳೆಸುವ ಬಗ್ಗೆ ಇಂದು ಗಂಭೀರ ಚಿಂತನೆ ನಡೆಯಬೇಕಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಈ ಬದಲಾವಣೆ ಸಾಧ್ಯ. ಹಾಗಾಗಿ ಶಾಲಾ, ಕಾಲೇಜು ಶಿಕ್ಷಣದಲ್ಲಿ ಇದನ್ನು ಕಡ್ಡಾಯ ಗೊಳಿಸಬೇಕೆಂದು ಅವರು ಹೇಳಿದರು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶು ಪಾಲ ಡಾ. ಬಿ. ಜಗದೀಶ ಶೆಟ್ಟಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮಾಸೆ ಬೈಲು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಸದಸ್ಯೆ ಸುಪ್ರೀತಾ ಕುಲಾಲ್, ಕುಂದಾಪುರ ವಲಯ ಮುಖ್ಯೋಪಾ ಧ್ಯಾಯರ ಸಂಘದ ಅಧ್ಯಕ್ಷ ಸೂರಪ್ಪ ಹೆಗ್ಡೆ, ಸರ್ಕಾರಿ ಹಿರಿಯ ಪ್ರಾ ಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿರಾಜ ಹೆಗ್ಡೆ, ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಾಧಿಕಾರಿ ಕಿಶೋರ್ ರಾವ್, ಶಿಬಿರಾಧಿಕಾರಿಗಳಾದ ಬಾಲ ರಾಜ್, ಸೌಮ್ಯ ಶೆಟ್ಟಿ, ಗೌರವ ಸಲಹೆಗಾ ರರಾದ ಡಾ. ಶ್ರೀಕಾಂತ್ ಸಿದ್ದಾಪುರ, ಮಂಜುನಾಥ ಕರಬ ಹಾಗೂ ಸುಕು ಮಾರ್ ಉಪಸ್ಥಿತರಿದ್ದರು.
ಶ್ರುತಿ ರಾವ್ ಕಾರ್ಯಕ್ರಮ ನಿರೂಪಿ ಸಿದರು. ಅವಿನಾಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.