ADVERTISEMENT

ಕೊಲ್ಲೂರು: ಸ್ವಚ್ಛತಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 7:15 IST
Last Updated 25 ಮಾರ್ಚ್ 2017, 7:15 IST

ಕುಂದಾಪುರ: ಕೊಲ್ಲೂರಿನಲ್ಲಿ ಈಚೆಗೆ ನಡೆದಿರುವ ನಾಗಮಂಡಲೋತ್ಸವ ಹಾಗೂ ಜಾತ್ರಾ ಕಾರ್ಯಕ್ರಮಗಳಿಂದಾಗಿ ಊರಿನಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯಗಳನ್ನು ನಿವಾರಣೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಗುರುವಾರ ಸ್ಥಳೀಯ ಗ್ರಾಮ ಪಂಚಾಯಿತಿ,

ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ, ಸ್ವ-ಸಹಾಯ ಗುಂಪುಗಳು, ಮಹಿಳಾ ಮಂಡಲ, ಆರೋಗ್ಯ ಕೇಂದ್ರ, ಪೋಲಿಸ್ ಇಲಾಖೆ, ವನ್ಯಜೀವಿ ವಲಯ, ದೇವಳದ ಕಾಲೇಜು ಹಾಗೂ ಪ್ರೌಢಶಾಲೆ, ಶ್ರೀಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಗ್ರಾಮಸ್ಥರ ಸಹಭಾಗತ್ವ ದೊಂ ದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ, ವರ್ಷಪೂರ್ತಿ ದೊಡ್ಡ ಸಂಖ್ಯೆಯ ಭಕ್ತರನ್ನು ಆಕರ್ಷಿಸುವ ಕೊಲ್ಲೂರಿನಲ್ಲಿ ಪರಸರದ ಸ್ವಚ್ಛತೆ ಪ್ರಥಮ ಆದ್ಯತೆಯಾಗಬೇಕು.

ನಿಸರ್ಗ ಶುದ್ಧ ಪರಿಸರಕ್ಕೆ ಹೆಸರುವಾ ಸಿಯಾಗಿರುವ ಮಾತೆ ಮೂಕಾಂಬಿಕೆಯ ಮನೆಯಾಗಿರುವ ಈ ಕ್ಷೇತ್ರದ ಪರಿಸರವು ಅನುಗಾಲವೂ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಾವು ತೋರುವ ಶೃದ್ಧೆಯೇ ನಿಜವಾದ ಭಕ್ತಿ ಸಮರ್ಪಣೆಯಾಗುತ್ತದೆ ಎಂದರು. 

ಕೊಲ್ಲೂರು ಠಾಣಾಧಿಕಾರಿ ಶೇಖರ್, ಕೊಲ್ಲೂರು ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮಾವಿ ನಕಾರ್, ಸದಸ್ಯರಾದ ಪ್ರೇಮಾ, ನೇತ್ರಾ ವತಿ, ಎಸ್. ಕುಮಾರ್, ಪ್ರಕಾಶ್ ಪೂಜಾ ರಿ, ಪಿಡಿಓ ಅನ್ನಮ್ಮ,ಮಹಿಳಾ ಮಂಡ ಲದ ಅಧ್ಯಕ್ಷೆ ಪ್ರಸನ್ನ ಶರ್ಮಾ ಹಾಗೂ ಸುಬ್ರಮಣ್ಯ ಪಡುಕೋಣೆ ಇದ್ದರು.

ಉದ್ಯಮಿ ರಮೇಶ್‌ ಗಾಣಿಗ ಅವರ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5.30 ರವರೆಗೆ ನಡೆಯಿತು. ಸುಮಾರು 400 ಸ್ವಯಂ ಸೇವಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT