ADVERTISEMENT

ಕ್ರೀಡಾ ನೀತಿಯಲ್ಲಿ ಪ್ರಸ್ತಾವ: ಸಚಿವ ಪ್ರಮೋದ್‌

ಥ್ರೋಬಾಲ್‌ ಟೂರ್ನಿಗೆ ಚಾಲನೆ: ಒಲಿಂಪಿಕ್ಸ್‌ ಚಿನ್ನ ವಿಜೇತರಿಗೆ ಪತ್ರಾಂಕಿತ ಹುದ್ದೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:17 IST
Last Updated 4 ಮಾರ್ಚ್ 2017, 6:17 IST

ಉಡುಪಿ: ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಪತ್ರಾಂಕಿತ ( ಕ್ಲಾಸ್‌ 1)ಹಾಗೂ ಏಷ್ಯನ್‌ ಗೇಮ್ಸ್, ಕಾಮನ್‌ವೆಲ್ತ್‌ ಕ್ರೀಡಾಕೂಟ ದಲ್ಲಿ ಚಿನ್ನದ ಪದಕ ಜಯಿಸುವವರಿಗೆ 2ನೇ ದರ್ಜೆ( ಕ್ಲಾಸ್‌2) ಹುದ್ದೆ ನೀಡುವ ಪ್ರಸ್ತಾವನೆಯನ್ನು ರಾಜ್ಯ ಕ್ರೀಡಾ ನೀತಿಯಲ್ಲಿ ಸೇರಿಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿ ಅವರ ಮನವೊಲಿಸಲಾಗುತ್ತಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್‌ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಹಿಳಾ ಥ್ರೋಬಾ ಲ್‌ ಟೂರ್ನಮೆಂಟ್‌ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ನೀತಿ ಬಹುತೇಕ ಅಂತಿಮಗೊಂಡಿದ್ದು, ಬರುವ ಬಜೆಟ್ ಅಧಿವೇಶನದಲ್ಲಿ  ಮಂಡಿಸಲಾ ಗುವುದು ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾ ನೀತಿ ಜಾರಿಗೊಳಿಸಿದ ರಾಜ್ಯದ ಮೊಟ್ಟ ಮೊದಲ ವಿ.ವಿಯಾ ಗಿದ್ದು, ಎಲ್ಲ ವಿ.ವಿಗಳು ಇದನ್ನು ಅನುರಿಸಬೇಕು. ಕ್ರೀಡಾ ಪಟುಗಳಿಗೆ ಉನ್ನತ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು. ಕ್ರೀಡಾ ಪಟುಗಳು ಕೆಲವೊಮ್ಮೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಅವರಿಗೆ ಕೆಲವು ವಿನಾಯಿತಿ ಗಳನ್ನು ನೀಡಿ ಪ್ರೊತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಇಂಗ್ಲೆಂಡ್‌ನ ಜನಸಂಖ್ಯೆ 6.34 ಕೋಟಿ ಮತ್ತು ಕರ್ನಾಟಕದ ಜನ ಸಂಖ್ಯೆ 6.4 ಕೋಟಿ ಇದೆ. ಆದರೆ ಇಂಗ್ಲೆಂಡ್‌ ಕ್ರೀಡೆಗಾಗಿ ಪ್ರತಿ ವರ್ಷ 2,228 ಕೋಟಿ ವಿನಿಯೋಗಿಸುತ್ತಿದೆ, ಆದರೆ ಕರ್ನಾಟಕ ಸರ್ಕಾರ ಕೇವಲ ₹125 ಕೋಟಿ ಮಾತ್ರ ಅನುದಾನ ನೀಡುತ್ತಿದೆ. ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸು ವಾಗ ತಮ್ಮ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದನ್ನು ಮನಸ್ಸಿನಲ್ಲಿಟ್ಟು ಕೊಳ್ಳ ಬೇಕು. ಕೇವಲ ‘ಪಿಕ್‌ನಿಕ್‌’ ಉದ್ದೇಶ ದಿಂದ ಕ್ರೀಡೆಯಲ್ಲಿ ಭಾಗವಹಿಸದೆ ಗೆಲ್ಲುವ ಛಲ ತೋರಬೇಕು ಎಂದರು.

ಮಣಿಪಾಲ್ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಆಡಳಿತಾಧಿ ಕಾರಿ ಡಾ. ಎಚ್‌. ಶಾಂತಾರಾಮ್ ಮಾತ ನಾಡಿ, ಕೇವಲ ಜ್ಞಾನ ಸಂಪಾದನೆಗೆ ಮಾತ್ರ ವಿದ್ಯಾರ್ಥಿಗಳು ಆದ್ಯತೆ ನೀಡದೆ, ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವ ಹಿಸಬೇಕು. ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹ ಸಾಧ್ಯವಾಗುತ್ತದೆ ಎಂದರು.

ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿ ಕಾರಿ ಸುರೇಶ್ ರಮಣ ಮಯ್ಯ ಉಪಸ್ಥಿ ತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್ ಸ್ವಾಗತಿಸಿದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ವಂದಿಸಿದರು.

*
ಕಾಲೇಜಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಎಲ್ಲ ವಿಶ್ವವಿದ್ಯಾಲಯಗಳು ತಮ್ಮದೇ ಆದ ಕ್ರೀಡಾ ನೀತಿ ಜಾರಿ ಮಾಡಬೇಕು.
-ಪ್ರಮೋದ್ ಮಧ್ವರಾಜ್‌,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT