ADVERTISEMENT

ಗಮನ ಸೆಳೆದ ಗಗನ ಕೌತುಕ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 9:17 IST
Last Updated 2 ಸೆಪ್ಟೆಂಬರ್ 2017, 9:17 IST
ಗಂಗೊಳ್ಳಿಯ ಆಗಸದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡುಬಂದ ’ಸೂರ್ಯನ ಬಳೆ’. (ಬೈಂದೂರು ಚಿತ್ರ)
ಗಂಗೊಳ್ಳಿಯ ಆಗಸದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡುಬಂದ ’ಸೂರ್ಯನ ಬಳೆ’. (ಬೈಂದೂರು ಚಿತ್ರ)   

ಬೈಂದೂರು : ಗಂಗೊಳ್ಳಿಯ ಆಕಾಶದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡುಬಂದ ’ಸೂರ್ಯನ ಬಳೆ’ ಹಲವರ ಗಮನ ಸೆಳೆದು ಕೌತುಕ ಮೂಡಿಸಿತು. ಕಂಡವರು ಗೆಳೆಯರ ಗಮನ ಸೆಳೆದರೆ, ಹಲವರು ಮೊಬೈಲ್‌ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿದರು. ಅದರ ಕುರಿತು ತಮಗೆ ತಿಳಿದಿರುವ ಮತ್ತು ಅದರ ಪರಿಣಾಮದ ಕುರಿತು ವಿವರ ವಿನಿಮಯ ಮಾಡಿಕೊಂಡರು.

ಇಲ್ಲಿ ಪ್ರಕಟಿಸಿದ ಚಿತ್ರ ತೆಗೆದು ಕೊಟ್ಟವರು ಗಂಗೊಳ್ಳಿಯ ವೆಲ್‌ಕಮ್ ಸ್ಟುಡಿಯೊ ಮಾಲೀಕ ಗಣೇಶ್ ಪಿ. ಅವರು. ಆಗಾಗ ಸೂರ್ಯ ಮತ್ತು ಚಂದ್ರ ಕೇಂದ್ರಿತವಾಗಿ ಸಂಭವಿಸುವ ಸೃಷಟಿಯಾಗುವ ಇಂತಹ ಬೃಹತ್ ಉಂಗುರವನ್ನು ವಿಜ್ಞಾನ ಸಾಹಿತ್ಯದಲ್ಲಿ 22 ಡಿಗ್ರಿ ಪ್ರಭಾವೃತ್ತ (ಹ್ಯಾಲೊ) ಎಂದು ಗುರುತಿಸಲಾಗುತ್ತದೆ.

ಈ ಉಂಗುರ ಸೂರ್ಯ ಮತ್ತು ಚಂದ್ರನ ಸುತ್ತ 22 ಡಿಗ್ರಿ ತ್ರಿಜ್ಯದಲ್ಲಿರುವುದರಿಂದ ಅದಕ್ಕೆ ಈ ಹೆಸರು. ಮೋಡದಲ್ಲಿರುವ ಅತಿಚಿಕ್ಕ ಘನೀಕೃತ ಹರಳುಗಳ ಮೂಲಕ ಬೆಳಕಿನ ಕಿರಣಗಳು ಪ್ರತಿಫಲನ ಅಥವಾ ವಕ್ರೀಕರಣಗೊಂಡಾಗ ಇದು ಉಂಟಾಗುತ್ತದೆ. ಇದನ್ನು ಬಿರುಗಾಳಿ ಮತ್ತು ಮಳೆಯ ಮುನ್ಸೂಚನೆ ಎಂದೂ ನಂಬಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.