ADVERTISEMENT

ಗಿರಿಜನರಿಗಾಗಿ ₹ 15 ಕೋಟಿ ವಿನಿಯೋಗ

ಜಿಲ್ಲಾಧಿಕಾರಿ ಡಾ. ಆರ್‌. ವಿಶಾಲ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 4:46 IST
Last Updated 25 ನವೆಂಬರ್ 2015, 4:46 IST

ಉಡುಪಿ: ಮೂಲನಿವಾಸಿ ಅಭಿವೃದ್ಧಿ ಯೋಜನೆಯಡಿ ಆರೋಗ್ಯ, ಶಿಕ್ಷಣ, ವಿದ್ಯಾರ್ಥಿವೇತನ, ವಸತಿ ಯೋಜನೆಗಳ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯ ದವರಿಗೆ ಶೈಕ್ಷಣಿಕ, ಆರೋಗ್ಯ ಹಾಗೂ ವಸತಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್‌. ವಿಶಾಲ್‌ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮೂಲನಿವಾಸಿ ಅಭಿವೃದ್ಧಿ ಯೋಜನೆ ಯಡಿ ಬಿಡುಗಡೆಯಾದ ಅನುದಾನ ಮತ್ತು ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಹಾಗೂ ಕೊರಗ ಸಮು ದಾಯದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಎಚ್‌.ಎಸ್‌. ಪ್ರೇಮನಾಥ್‌ ಮಾತನಾಡಿ, ಜಿಲ್ಲೆಗೆ 2008ರಿಂದ 2014ರ ವರೆಗೆ ಒಟ್ಟು ₹25.11 ಕೋಟಿ ಅನುದಾನ ಬಂದಿದ್ದು, ಈ ವರೆಗೆ ₹15.45 ಕೋಟಿ ಅನುದಾನವನ್ನು ಅಭಿವೃದ್ಧಿಗೆ ವ್ಯಯಿಸ ಲಾಗಿದೆ. ಒಟ್ಟು 3,612 ಫಲಾನುಭವಿ ಗಳು ಯೋಜನೆಯ ನೆರವು ಪಡೆದಿ ದ್ದಾರೆ. 1,500 ವಸತಿ ನಿರ್ಮಾಣದ ಗುರಿ ಯಿದ್ದು, ಈಗಾಗಲೇ 483 ಮನೆಗಳು ಪೂರ್ಣಗೊಂಡಿವೆ. 379  ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಕೊರಗ ಸಮುದಾಯದ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ಉಡುಪಿ ವಲಯದ ಪುತ್ತೂರು, ಮಂಚಿಕೋಡಿ, ಕಾಪು ವಲ ಯದ ಶಿರ್ವ, ಕಳತ್ತೂರು ಸೂರ್ಯಗುಡ್ಡೆ, ಬೈಂದೂರು ವಲಯದ ನಾಡ, ಪಡು ಕೋಣೆ ಮತ್ತು ಕಾರ್ಕಳ ವಲಯದ ಹೆಬ್ರಿ ಬಡಾಗುಡ್ಡೆಗಳಿಗೆ ಈಗಾಗಲೇ ಶಿಕ್ಷಕರನ್ನು ನೇಮಿಸಲಾಗಿದೆ. ಕುಂದಾಪುರ ವಲ ಯದ ಶಂಕರನಾರಾಯಣ, ಮುದೂರು, ಬೈಂದೂರಿನ ಕಡಾರಿ ವಲಯಕ್ಕೆ ಶಿಕ್ಷಕರ ನೇಮಕ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್‌. ದಿವಾಕರ ಶೆಟ್ಟಿ ಮಾಹಿತಿ ನೀಡಿದರು.

ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿರುವ ಕೊರಗ ಸಮು ದಾಯದ ವಿದ್ಯಾರ್ಥಿಗಳಿಗೆ ಏಪ್ರಿಲ್‌ ನಿಂದ ವಿಶೇಷ ಕೋಚಿಂಗ್‌, ಸಿಇಟಿ ಪೂರ್ವ ತರಬೇತಿ ನೀಡಲಾಗುವುದು.
ಡಾ. ಆರ್‌. ವಿಶಾಲ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.